ಚಿಕ್ಕಮಗಳೂರು :ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿ ಗ್ರಾಮದ ನಿವಾಸಿ ತಮ್ಮಯ್ಯ(68)ಕಪ್ಪು ಶಿಲೀಂದ್ರ ಕಾಯಿಲೆಗೆ ತುತ್ತಾಗಿ ಸಾವಪ್ಪಿದ್ದಾರೆ .
ತಿಂಗಳ ಹಿಂದೆ ಕರೊನಾ ಸೋಂಕು ತಗುಲಿತ್ತು. ಚಿಕಿತ್ಸೆಯ ನಂತರ ಚೇತರಿಸಿ ಕೊಂಡಿದ್ದರು. ಮತ್ತೆ ಆರೋಗ್ಯ ಬಿಗಡಾಯಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದಾಗ ಕಪ್ಪು ಶಿಲೀಂದ್ರ ( ಬ್ಲ್ಯಾಕ್ ಫಂಗಸ್) ಸೋಂಕು ತಗುಲಿರುವುದು ಪತ್ತೆಯಾಯಿತು.
ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು.
ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.
Tags
ಚಿಕ್ಕಮಗಳೂರು
