ಕೊರೋನಾ ನಡುವೆ ಮಳೆಯ ಆರ್ಭಟ ತತ್ತರಿಸಿ ಹೋದ ನಗರದ ಜನತೆ

ಹಾಸನ: ಒಂದು ಕಡೆ ಕೊರೋನಾದಿಂದ ಆರ್ಥಿಕತೆ ಮೇಲೆ ಪೆಟ್ಟು ಬಿದ್ದು, ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಹಲವು ದಿವಸಗಳಿಂದ ಸುರಿಯುತ್ತಿರುವ ಮಳೆಯು ನಗರದಲ್ಲಿ ವ್ಯಾಪಾರ ವಹಿವಾಟಿಗೆ ಅಡಚಣೆ ಉಂಟು ಮಾಡಿದೆ.
       ಕೊರೋನಾ ಎಂಬ ಮಹಾಮಾರಿ ಮಾರ್ಚ್ ತಿಂಗಳಲ್ಲಿ ಹೊರ ಬಾಗದಿಂದ ಕಾಣಿಸಿಕೊಂಡು ನಂತರದಲ್ಲಿ ಒಳ ಎಲ್ಲಾ ಜಿಲ್ಲೆಗಳಲ್ಲೂ ಕೂಡ ವ್ಯಾಪಿಸಿ ಜನ ಜೀವನ ನಡೆಸುವುದೇ ಕಷ್ಟಕರ ಪರಿಸ್ಥಿತಿ ಬಂದಿದೆ. ಈಗ ಜೊತೆ ಜೊತೆಗೆ ಮಳೆ ರಾಯನ ಆರ್ಭಟ ಹೆಚ್ಚಾಗಿ ವ್ಯಾಪಾರವಹಿವಾಟು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯು ಗ್ರಾಮಗಳ ಪ್ರದೇಶದಲ್ಲಿ ಅವಶ್ಯಕವಾಗಿದೆ. ಆದರೇ ನಗರಗಳಲ್ಲಿ ಸುರಿದು ಜನತೆ ಹೊರಗೆ ಬರುತ್ತಿಲ್ಲ. ಇನ್ನು ಬೀದಿ ಬದಿ ವ್ಯಾಪಾರ ಮಾಡುವವರ ಪಾಡು ಹೇಳತೀರದು. ಗಂಟೆಗಟ್ಟಲೆ ಮಳೆ ಒಳಗೆ ಕುಳಿತು ಆ ಕೆಸರಿನಲ್ಲಿ ಪರದಾಡಬೇಕಾಗಿದೆ. ಹಣಕೊಟ್ಟು ತಂದ ಮಾಲು ವ್ಯಾಪಾರವಾಗದೇ ನಷ್ಟ ಅನುಭವಿಸಬೇಕಾಗಿದೆ. ಇನ್ನು ಜೀವನಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದವರು ಇಂದು ಕೆಲಸವಿಲ್ಲದೇ ವಾಪಸ್ ತವರಿಗೆ ಬಂದು ಜಾಂಡ ಊರಿದ್ದಾರೆ. ಇಲ್ಲಿ ಇರುವ ಕಂಪನಿ ಸೇರಿದಂತೆ ವಿವಿಧ ಕಡೆ ಕೆಲಸಗಾರರನ್ನು ತೆಗೆದು ಹಾಕಲಾಗುತ್ತಿದೆ. ಸ್ಥಳೀಯವಾಗಿ ಹಲವಾರು ವರ್ಷಗಳಿಂದ ಹಾಸನ ಜಿಲ್ಲೆಯಲ್ಲೆ ಜೀವನ ಮಾಡುತ್ತಿರುವವರಿಗೆ ಕೆಲಸವಿಲ್ಲದೇ ಪರದಾಡುತ್ತಿರುವಾಗ ಇನ್ನು ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವವರ ಪಾಡೇನು?
     ಕೊರೋನಾ ಎಂಬ ವೈರಸ್ ಹರಡುವುದು ದಿನೆ ದಿನೆ ಹೆಚ್ಚಾಗಿ ಆಸ್ಪತ್ರೆಗಳೆಲ್ಲಾ ತುಂಬಿ ಹೋಗಿದೆ. ಇಷ್ಟಲ್ಲದೇ ಪ್ರತಿನಿತ್ಯ ಸಾವುಗಳು ಸಂಭವಿಸುತ್ತಿರುವುದು ಇನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಕೊರೋನಾ ಬಗ್ಗೆ ಜಿಲ್ಲಾಡಳಿತ ಅಷ್ಟೆಲ್ಲಾ ಅರಿವು ಮೂಡಿಸುತ್ತಿದ್ದರೂ ಕೆಲವರಿಗೆ ಕಿವಿ ಕೇಳಿಸದಾಗೆ ಇದ್ದು, ತಾವು ವೈರಸ್ ಅಂಟಿಕೊಳ್ಳಿಸುವುದರ ಜೊತೆಗೆ ಮತ್ತಿಷ್ಟು ಜನರಿಗೆ ಬರುತ್ತಿರುವುದು ಒಂದು ರೀತಿ ತಲೆ ನೋವಾಗಿ ಪರಿಣಮಿಸಿದೆ.

Post a Comment

Previous Post Next Post