ಮಾರಣಾಂತಿಕ ಹಲ್ಲೆಯಲ್ಲಿ ಓರ್ವಸಾವು, ಮತ್ತೋರ್ವನಿಗೆ ತೀವ್ರ ಗಾಯ

ಹಾಸನ: ನಗರದ ರಿಂಗ್ ರಸ್ತೆಯಲ್ಲಿ ಗುಂಪೊಂದು ಸ್ಲಂ ಬೋರ್ಡ್ ಭಾಗದ ಇಬ್ಬರೂ ಯುವಕರ ಮೇಲೆ ಹಲ್ಲೆ ನಡೆದು ಸ್ಥಳದಲ್ಲಿ ಓರ್ವ ಮೃತಪಟ್ಟರೇ ಮತ್ತೋರ್ವ ತೀವ್ರ ಗಾಯಗೊಂಡು ಸಾವು-ಬದುಕಿನ ನಡುವೇ ಹೋರಾಡುತ್ತಿರುವ ಘಟನೆ ಗುರುವಾರ ಸಂಜೆ ನಡೆದಿದೆ.
       ರಿಂಗ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ತಾನದ ಬಳಿ ಇರುವ ಉಲ್ಲಾಸ್ ಬಾರ್ ಬಳಿ ಯುವಕರು ಕಂಠಪೂರ್ತಿ ಕುಡಿದಿದ್ದು, ಈ ವೇಳೆ ಮತ್ತೊಂದು ಗುಂಪು ಮಾತಿಗೆ ಮಾತು ನಡೆದು ನಂತರ ಕೈಕೈ ಮಿಲಾಯಿಸುವಷ್ಟು ಬೆಳೆದು ಮಾರಣಾಂತಿಕ ಹಲ್ಲೆಯಲ್ಲಿ ಪುನೀತ್ (23) ವರ್ಷ ಎಂಬುವರು ಸ್ಥಳದಲ್ಲೇ ಸಾವನಪ್ಪಿದರೇ ಮತ್ತೋರ್ವ ಯುವಕ ಚಂದನ್ ಎಂಬುವರ ಮೇಲೂ ಹಲ್ಲೆ ನಡೆದುÁ್ಸವು-ಬದುಕಿನ ನಡುವೇ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ. ಈ ಹಲ್ಲೆಗೆ ನಿಕರವಾದ ಕಾರಣ ತಿಳಿದು ಬಂದಿರುವುದಿಲ್ಲ. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Post a Comment

Previous Post Next Post