ಅಬಕಾರಿ ಇಲಾಖೆಯಿಂದ ಜನ ಜಾಗೃತಿ ಸಭೆ


 ಕಳ್ಳಭಟ್ಟಿ ಸಾರಾಯಿ ನಿರ್ಮೂಲನೆ ಅಭಿಯಾನದಡಿ ಶಿವಮೊಗ್ಗ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಶಿಕಾರಿಪುರ, ಸಾಗರ ಮತ್ತು ಸೊರಬ ವಲಯ ವ್ಯಾಪ್ತಿಯಲ್ಲಿ ಪ್ರತಿ ದಿನ ಸಾಮೂಹಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಶಿಕಾರಿಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಕೆಲವು ಕಳ್ಳಭಟ್ಟಿ ಕೇಂದ್ರಗಳಲ್ಲ್ಲಿ ಕಳ್ಳಭಟ್ಟಿ ಅಕ್ರಮವು ಚಾಲ್ತಿಯಲ್ಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ದಿನಾಂಕ: 24-08-2020 ರಂದು ಶ್ರೀಮತಿ ಶೈಲಜಾ ಎ. ಕೋಟೆ ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ರವರ ಮುಂದಾಳತ್ವದಲ್ಲಿ ಶಿಕಾರಿಪುರ ತಾಲ್ಲೂಕಿನ ಹಂಚಿ ತಾಂಡಾ, ಚಿಕ್ಕಮಾಗಡಿ ತಾಂಡಾ, ಮಳವಳ್ಳಿ ತಾಂಡಾಗಳಲ್ಲಿ ಸಾಮೂಹಿಕ ದಾಳಿ ನಡೆಸಿ ನಂತರ ಸಭೆಯನ್ನು ನಡೆಸಿ ಸಾರ್ವಜನಿಕರಿಗೆ ಜನ ಜಾಗೃತಿ ಮೂಡಿಸಲಾಯಿತು.   
ಈ ಸಂದರ್ಭದಲ್ಲಿ ಶ್ರೀ ಕ್ಯಾಪ್ಟನ್ ಅಜಿತ್‍ಕುಮಾರ್ ಜಿ ಎ, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀಮತಿ ಲೀಲಾವತಿ ಡಿ. ಅಬಕಾರಿ ಉಪ ಅಧೀಕ್ಷಕರು, ಸಾಗರ ಉಪ ವಿಭಾಗ ಹಾಗೂ ಜಿಲ್ಲೆಯ ವಿವಿಧ ಅಬಕಾರಿ ನಿರೀಕ್ಷಕರುಗಳು ಮತ್ತು ಉಪ ನಿರೀಕ್ಷಕರುಗಳು ಹಾಜರಿರುತ್ತಾರೆ.

Post a Comment

Previous Post Next Post