ಜಯರ‍್ನಾಟಕ ಸಂಘಟನೆ ವತಿಯಿಂದ ಕೋವೀಡ್ ೧೯ ಜಾಗೃತೆ ಮೂಡಿಸಲು ಪ್ರತೀ ಗ್ರಾಮಗಳಿಗೆ ಮೂರು ದಿನಗಳವರೆಗೆ ಆಟೋ ಧ್ವನಿರ‍್ಧಕ ಚಾಲನೆ ಮೂಲಕ ಜಾಗೃತಿ ಮೂಡಿಸುವ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರುವ ಇಲ್ಲಿವರೆಗೂ ಪಟ್ಟಣದಲ್ಲಿ ಕೋವೀಡ್ ಸೊಂಕಿತರು ಹೆಚ್ಚಿದ್ದು ಈಗ ಅದು ಗ್ರಾಮಗಳಿಗೆ ವ್ಯಾಪಿಸಿದೆ.ಅದರಲ್ಲೂ ಗ್ರಾಮದಲ್ಲಿ ಕೋವೀಡ್ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ. ಅವರಿಗೆ ಜಾಗೃತಿ ಮೂಡಿಸುವುದು ತಾಲೂಕು ಆಡಳಿತ ಪ್ರತೀ ಗ್ರಾಮಗಳಿಗೆ ಹೋಗಿ ಅರಿವು ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಸಿಪಿಐ ಶ್ರೀಕಾಂತ್
ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದೆ ಮನೆಯಲ್ಲೆ ಇದ್ದು ಸಮುದಾಯಕ್ಕೆ ಸೋಂಕು ಹರಡದಂತೆ ತಡೆ ಗಟ್ಟಲು ತಾಲೂಕು ಆಡಳಿತದೊಂದಿಗೆ ತಾಲ್ಲೂಕಿನ ಪ್ರತಿಯೊಬ್ಬ ನಾಗರೀಕರು ಸಹಕಾರ ನೀಡಬೇಕೆಂಬುದು ತಾಲ್ಲೂಕು ಜಯ ರ‍್ನಾಟಕ ಸಂಘಟನೆಯಿಂದ ಆಟೋಗೆ ದ್ವನಿ ರ‍್ಧಕ ಅಳವಡಿಸಿ ತಾಲ್ಲೂಕಿನಾಧ್ಯಂತ ಜನರಲ್ಲಿ ಅರಿವು ಮೂಡಿಸುವ ಕರ‍್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಂತರ ಮಾತನಾಡಿದ ವೈಧ್ಯಾಧಿಕಾರಿ ಡಾ,ವಿಜಯ್ ಕರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತಿದ್ದು ಬಡವ ಶ್ರೀಮಂತ ಎನ್ನದೆ ಎಲ್ಲರಲ್ಲೂ ಕಾಡುತ್ತಿದೆ. ಅದರಲ್ಲೂ ೨೦೨೦ ರಲ್ಲಿ ಪಟ್ಟಣದಲ್ಲಿ ಹೆಚ್ಚಾಗಿ ಇತ್ತು,ಈಗ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ.ಕೋವೀಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗ್ರಾಮದಲ್ಲಿ ನರ‍್ಲಕ್ಷ ಉದಾಸೀನಾ ಮಾಡುತ್ತಿದ್ದಾರೆ.ಮನೆಯಲ್ಲೇ ಹೊಂ ಕ್ವಾರೆಂಟೇನ್ ಇದ್ದರೂ ನಿಯಮಗಳನ್ನು ಪಾಲಿಸುತ್ತಿಲ್ಲ.
ಈ ಕರೊನಾ ಸೋಂಕಿನಿಂದಾಗಿ ಬೇಲೂರು ತಾಲೂಕಿನಲ್ಲೂ ಈಗಾಗಲೆ ಸಾಕಷ್ಟು ಜನರು ಸಾವನಪ್ಪಿದ್ದು, ಮತ್ತಷ್ಟು ಜನರು ಸೋಂಕಿತರಾಗಿ ಚಿಕಿತ್ಸೆ ಪಡೆಯುತಿದ್ದಾರೆ.
ಈ ಹಿನ್ನೆಲೆಯಲ್ಲಿ ಕರೋನಾ ಸೋಂಕು ಬೇರೆಯವರಿಗೆ ಹರಡದಂತೆ ತಡೆ ಗಟ್ಟುವುದಕ್ಕಾಗಿ ಪತ್ರಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಮಾಜಿಕ ಅಂತರ ಕಾಪಾಡಿಕೊಂಡು, ಆಗಿಂದ್ದಾಗ್ಗೆ ಕೈಗಳನ್ನು ತೊಳೆದು ಕೊಳ್ಳಬೇಕು ಎಂದರು.
ಈ ಸಂರ‍್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಒ ರವಿಕುಮಾರ್, ಪಿಎಸ್ಐ ಎಸ್ ಜಿ ಪಾಟೀಲ್,,
ಜಯ ರ‍್ನಾಟಕ ಸಂಘಟನೆ
ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್,
ತಾಲ್ಲೂಕು ಅಧ್ಯಕ್ಷ ಎಸ್.ಎಂ.ರಾಜು, ಕರ‍್ಯಾಧ್ಯಕ್ಷ ಬಿ.ಎಲ್.ಲಕ್ಷ್ಮಣ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಬಂಡೆ ಮಂಜು, ಕೇಬಲ್ ಕೇಶವಮರ‍್ತಿ, ವಜೀರ್ ಅಹಮದ್ ಇದ್ದರು.
