ಕೆ ಎಸ್ ಲಿಂಗೇಶ್ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ.

ತಾಲೂಕು ಪಂಚಾಯತಿ ಕರ‍್ಯನರ‍್ವಹಣಾ ಅಧಿಕಾರಿ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಈಗಾಗಲೇ ಪ್ರತೀ ಗ್ರಾಮಪಂಚಾಯಿತಿ ಗಳಲ್ಲಿ ಕೋವೀಡ್ ಮರ‍್ಗಸೂಚಿಯ ಬಗ್ಗೆ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಜೊತೆ ವೀಡಿಯೋ ಸಂವಾದದಲ್ಲಿ ಮಾತನಾಡಿದ ಶಾಸಕರು ಗ್ರಾಮಗಳಿಗೆ ಹೊರಜಿಲ್ಲೆಗಳಿಂದ ಬರುವಂತವರ ಬಗ್ಹೆ ಸೂಕ್ತ ಮಾಹಿತಿಯನ್ನು ಕಲೆಹಾಕಬೇಕು.ಕೋವೀಡ್ ಪಾಸಿಟಿವ್ ಇರುವ ವ್ಹಕ್ತಿಗಳ ಚಲನವಲನಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಬೇಕು.ಪ್ರತೀ ಗ್ರಾಮಗಳಿಗೆ ತೆರಳಿ  ಸ್ವಚ್ಚತೆಯ ಬಗ್ಗೆ ಹೆಚ್ಚಿನ ಆದ್ಯತೆಯನ್ನು ಪ್ರತಿನಿತ್ಯ ನೀಡಬೇಕು.ಅಲ್ಲದೆ ಕುಡಿಯುವ ನೀರು ಸೇರಿದಂತೆ ಟ್ಯಾಂಕ್ ಗಳನ್ನು ಎರಡು ದಿನಕ್ಕೊಮ್ಮೆ ಸ್ವಚ್ಚ ಗೊಳಿಸಬೇಕು.ನಮ್ಮ ತಾಲೂಕಿನಿಂದ ಬೇರೆಡೆಗೆ ಹೋಗಿ ನಂತರ ವಾಪಸ್ಸು ಬಂದಿರುವವರಿಗೆ ನರೇಗಾ ಯೋಜನೆಯಡಿ ಕೆಲಸವನ್ನು ನೀಡಬೇಕು.ಗ್ರಾಮದ ಅಂಗಡಿಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಗುಂಪು ಗೂಡಬಾರದು,ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬುವುದರ ಬಗ್ಗೆ ಸೂಚಿಸಿದರು.


ಕರ‍್ಯನರ‍್ವಹಣಾ ಅಧಿಕಾರಿ ರವಿಕುಮಾರ್ ಮಾತನಾಡಿ ದಿನದಿಂದ ದಿನಕ್ಕೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಸೋಂಕು ಕಾಣಿಸುತ್ತಿರುವುದರಿಂದ ಗ್ರಾಮ ಪಂಚಾಯತಿ ಪಿಡಿಓಗಳು ಹೆಚ್ಚಿನ ಜಾಗೃತಿ ವಹಿಸಬೇಕು.ಪಾಸಿಟಿವ್ ಬಂದಿರುವ ವ್ಯಕ್ತಿಗಳ ಮನೆಗಳ ಸುತ್ತಾ ಸ್ಯಾನಿಟೈಜರ್ ಮಾಡಿಸಬೇಕು.

ಗ್ರಾಮಗಳಲ್ಲಿ ಬಡವರು ,ನರ‍್ಗತಿಕರು ಸಾಮಾಜಿಕವಾಗಿ ರ‍್ಥಿಕವಾಗಿ ಬಹಳ ಹಿಂದುಳಿದವರು ಇದ್ದರೆ ಎಲ್ಲಾ ರೀತಿಯ ಸಹಕಾರವನ್ನು ಗ್ರಾಮಪಂಚಾಯಿತಿ ವತಿಯಿಂದ ಸಹಾಯವನ್ನು ಮಾಡಬೇಕು.ಪ್ರತಿನಿತ್ಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಗ್ರಾಮಪಂಚಾಯಿತಿ ಯಲ್ಲಿ ಇರತಕ್ಕದ್ದು,ಯಾವುದೇ ಗ್ರಾಮಪಂಚಾಯಿತಿ ಯಲ್ಲಿ ಲೋಪದೋಷಗಳು ಕಂಡುಬಂದರೆ ನೇರವಾಗಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂರ‍್ಭದಲ್ಲಿ ತಹಶೀಲ್ದಾರ್ ಎನ್ ವಿ ನಟೇಶ್,ವೃತ್ತ ನಿರೀಕ್ಷಕ ಶ್ರೀಕಾಂತ್, ಆರೋಗ್ಯ ಅಧಿಕಾರಿ ಡಾ,ವಿಜಯ್,ಡಾ ನರಸೇಗೌಡ ಪಿಎಸ್ಐ ಎಸ್ ಜಿ ಪಾಟೀಲ್,ಮುಖ್ಯಾಧಿಕಾರಿ ಸುಜಯ್ ಹಾಜರಿದ್ದರು.



Post a Comment

Previous Post Next Post