ಹಂಗರವಳ್ಳಿ ಗ್ರಾಮಸ್ಥರಿಂದ ವಿಶೇಷ ಗೌರಿ ಹಬ್ಬ ಆಚರಣೆ

ಚಿಕ್ಕಮಗಳೂರು,ಆ.21: ಜಿಲ್ಲೆಯ ವಿವಿಧ ಭಾಗದಲ್ಲಿ ಗೌರಿ ಹಬ್ಬವನ್ನು ಕರೊನಾ ನಡುವೆ ವಿಶೇಷವಾಗಿ ಆಚರಿಸಲಾಗಿದೆ. ಹೆಚ್ಚಿನ ಭಾಗದಲ್ಲಿ ಮನೆಯಲ್ಲಿಯೇ ಸರಳ ರೀತಿಯಲ್ಲಿ ಆಚರಿಸಲಾಯಿತು.

ಜಿಲ್ಲೆಯ ಆಲ್ದೂರು ಸಮೀಪದ ಹಂಗರವಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಾಮೂಹಿಕವಾಗಿ ಹೆಣ್ಣು ಮಕ್ಕಳಿಂದಾ ಗೌರಿ ಪೂಜೆ ನೆಡೆದಿದ್ದು. ಸುಮಾರು 30 ಕ್ಕೂ ಹೆಚ್ಚು ಜನ ಮಹಿಳೆಯರು ಈ ಪೂಜೆಯಲ್ಲಿ ಭಾಗಿಯಾಗಿದ್ದರು.


ಅನೇಕ ವರ್ಷಗಳಿಂದ ಈ ಸಂಪ್ರದಾಯ ಈ ಗ್ರಾಮದಲ್ಲಿ ನೆಡೆದು ಕೊಂಡು ಬಂದಿದ್ದು ಪ್ರತಿ ಮನೆಯ ಹೆಣ್ಣು ಮಕ್ಕಳು ಈ ವಿಶೇಷ ಪೂಜೆಯಲ್ಲಿ ಭಾಗವಹಿಸೋದು ತುಂಬಾ ವಿಶೇಷವಾಗಿದೆ. ಹೊಸದಾಗಿ ಮದುವೆಯಾಗಿ ಗ್ರಾಮಕ್ಕೆ  ಬಂದ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಬಾಗಿನ ಅರ್ಪಿಸುವ ಕಾರ್ಯಕ್ರಮವೂ ನಡೆಯುತ್ತದೆ. ಈ ಸಂಧರ್ಭದಲ್ಲಿ ಎಳ್ಳಿನಿಂದ ಮಾಡಿದ ಚಿಗಲಿ ಉಂಡೆ, ಹಾಗೂ ಟಮಟ ಕಾಯಿ ಬಾಳೆಹಣ್ಣನ್ನು ಎಲ್ಲರಿಗೂ ವಿತರಣೆ ಮಾಡಲಾಗುತ್ತದೆ.

ಗಂಗೆ ಪೂಜೆಯ ನಂತರ ಮುತೈದೆಯರಿಗೆ ಅರಿಶಿನ ಕುಂಕುಮ ನೀಡಿ. ಗೌರಿಯನ್ನು ಮನೆಗೆ ಕೊಂಡೊಯ್ಯುತ್ತಾರೆ. ಈ ಬಾರಿ ಮಳೆಯ ಆರ್ಭಟದ ಜೊತೆ ಗೌರಿ ಪೂಜೆ ತುಂಬಾ ಸಂಭ್ರಮ ಹಾಗೂ ಸಡಗರದಿಂದ ನಡೆದಿದೆ.

Post a Comment

Previous Post Next Post