ಕರ್ತವ್ಯ ನಿರತ ಮುಖ್ಯ ಪೊಲೀಸ್ ಪೇದೆಗೆ ವಾಹನ ಡಿಕ್ಕಿ ಹೊಡೆದು ಸಾವು

ಹಾಸನ: ಕರ್ತವ್ಯ ನಿರತ ಮುಖ್ಯ ಪೊಲೀಸ್ ಪೇದೆ ಮೇಲೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಾವಿಗೀಡಾದ ಘಟನೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಸಮೀಪ ನಡೆದಿದೆ. 
ಮಧುಸೂಧನ್ (45) ಸಾವಿಗೀಡಾದ ಮೃತ ಪೊಲೀಸ್ ಮುಖ್ಯಪೇದೆ. ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗಾಡೇನಹಳ್ಳಿ ಗೇಟ್ ಸಮೀಪ  ಹತ್ತಿರ ಹಾಸನ ಸಂಚಾರಿ ಪೊಲೀಸರು ಇಂಟರ್ ಸೆಪ್ಟೆರ್  ವಾಹನದ ಮೂಲಕ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಅತಿವೇಗವಾಗಿ ಬಂದ ಕಾರೊಂದು ಕರ್ತವ್ಯ ನಿರತರಾಗಿದ್ದ ಮಧುಸೂದನ್ ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ತರವಾದ  ಗಂಭೀರ ಗಾಯಗೊಂಡಿದ್ದರು. 

ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ ಮೃತಪಟ್ಟಿದ್ದಾರೆ. ಅಪಘಾತವೆಸಗಿದ ಕಾರಿನ ನಂಬರ್ ಕಲೆಹಾಕಿರೋ ಪೊಲೀಸರು ಆರೋಪಿತನಿಗಾಗಿ ಬಲೆ ಬೀಸಿದ್ದಾರೆ. 

ಈ ಬಗ್ಗೆ  ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣನದಾಖಲಾಗಿದೆ.

Post a Comment

Previous Post Next Post