ಹೆಸರಿಗಷ್ಟೇ ಸೀಮಿತವಾದ ಹೈಮಾಸ್ಕ್ ಲೈಟ್

ಆಲೂರು ಪಟ್ಟಣದ ಹೃದಯ ಭಾಗ ಅನಿಸಿಕೊಂಡಿರುವ ತಾಲ್ಲೂಕು ಬಸ್ ನಿಲ್ದಾಣದ ಹಾಗೂ ಪೊಲೀಸ್ ಠಾಣೆಯ ಮುಂಭಾಗವಿರುವ ಹೈಮಾಸ್ಟ್ ಲೈಟ್ ಕೇವಲ ಹೆಸರಿಗಷ್ಟೇ ಹಾಗೂ ನೋಡಲಿಕ್ಕಷ್ಟೆ ಸೀಮಿತವಾಗಿದ್ದು ಯಾವುದೇ ರೀತಿಯ ಪ್ರಯೋಜನಕ್ಕೆ ಬರದೆ ನಿಷ್ಕ್ರಿಯವಾಗಿದೆ ಏಕೆಂದರೆ ಐವಾಸ್ ಲೈಟ್ ಕೆಟ್ಟು ಹೋಗಿ ಹಲವು ವಾರಗಳೇ ಕಳೆದಿದ್ದು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಸರಿಪಡಿಸಬಹುದಾದ ಕ್ರಮಗಳನ್ನು ಕೈಗೊಳ್ಳದೆ ಕಂಡು ಕಾಣದಂತೆ ಇದ್ದಾರೆ
ಪ್ರತಿನಿತ್ಯ ಏನಿಲ್ಲ ಎಂದರೂ ಸರಿಸುಮಾರು ರಾತ್ರಿ ಹತ್ತು ಹನ್ನೊಂದು ಗಂಟೆಯವರೆಗೂ ಈ ಸ್ಥಳದಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯರು ಓಡಾಡುತ್ತಲೇ ಇರುತ್ತಾರೆ ಆದ ಕಾರಣ ಯಾವುದೇ ರೀತಿಯ ಅನಾಹುತಗಳು ಆಗುವುದಕ್ಕೂ ಮೊದಲೇ ಸಂಬಂಧಪಟ್ಟ ಇಲಾಖೆಯೇ ಆಗಲಿ ಅಥವಾ ಅಧಿಕಾರಿಗಳೇ ಆಗಲಿ ಸಾರ್ವಜನಿಕರ ಹಾಗೂ ಪ್ರಯಾಣಿಕರ ಹಿತದೃಷ್ಟಿಯ ಕಾರಣದಿಂದಾಗಿ ಕೂಡಲೇ ನೆಪ ಮಾತ್ರಕ್ಕೆ ಇರುವ ಹೈಮಾಸ್ಟ್ ಲೈಟ್ ಅನ್ನು ಸರಿಪಡಿಸಬೇಕೆಂದು ಸ್ಥಳೀಯರು ಹಾಗೂ ಆಟೊ ಚಾಲಕರು ಆಗ್ರಹಿಸಿದ್ದಾರೆ

Post a Comment

Previous Post Next Post