ಸಕಲೇಶಪುರ ಮೀಸಲು ಅರಣ್ಯ ಪ್ರದೇಶದ ಕೆಂಪುಹೊಳೆಯಲ್ಲಿ ಇಂದು ತಾಯಿಯಿಂದ ಬೇರ್ಪಟ್ಟ ಮರಿ ಆನೆಯೊಂದು ಮೃತ ಪಟ್ಟು ಕೆಂಪು ಹೊಳೆಯಲ್ಲಿ ಕೊಚ್ಚಿಕೊಂಡು ಬಂದಿರುವ ಘಟನೆ ನಡೆದಿದೆ.
ಆನೆ ಮರಿ ನದಿ ದಾಟುವಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ ಹತ್ತು ದಿನದ ಮರಿ ಎಂದು ಹೇಳಲಾಗಿದ್ದು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು .
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳಾದ ಶಿಲ್ಪ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಮೇಶ್ ಮತ್ತು ಲೋಕೇಶ್ ಉಮೇಶ್ ಇದ್ದರು.
Tags
ಸಕಲೇಶಪುರ