ಹಾಸನದಲ್ಲಿಂದು ಒಟ್ಟು 220 ಕರೋನ ಪಾಸಿಟಿವ್ ಪತ್ತೆ ಹಾಗೂ 2 ಸಾವು

ಹಾಸನ: ಜಿಲ್ಲೆಯಲ್ಲಿ  ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 220 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು 2 ಜನ ಮೃತಪಟ್ಟಿದ್ದಾರೆ. 
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12220 ಕ್ಕೆ ಏರಿಕೆಯಾಗಿದ್ದು, 9062 ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 2909 ಸಕ್ರಿಯ ಪ್ರಕರಣಗಳಿದ್ದು, 53 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 249 ಜನ ಮೃತಪಟ್ಟಿದ್ದಾರೆ.

Post a Comment

Previous Post Next Post