ಶಿವಮೊಗ್ಗ ಆಗಸ್ಟ್ 29:- ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಜಿಲ್ಲಾ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಬಿಜೆಪಿ ಮುಖಂಡರು ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗಿತ್ತು.
ಕೋವಿಡ್19ರ ವಿರುದ್ದ ಅವಿರತವಾಗಿ ಹೋರಾಡುತ್ತಿರುವ ದೇಶದ ಹೆಮ್ಮೆಯ ನಾಯಕ ಪ್ರಧಾನಿಯವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಜಿಲ್ಲಾ ವಕ್ತಾರ, ಮಾಜಿ ಕಾರ್ಪೊರೇಟರ್ ದೀಪಕ್ ಸಿಂಗ್ ಎನ್ನುವವರು ತಮ್ಮ ಫೇಸ್’ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ, ನಿಂದಿಸಿದ್ದಾರೆ. ಪ್ರಧಾನಿವರಿಗೆ ಅವಮಾನ ಮಾಡುವ ಒಂದೇ ಉದ್ದೇಶದಿಂದ ಈ ಪೋಸ್ಟ್ ಹಾಕಿದ್ದು, ಇಂತಹ ಪೋಸ್ಟ್’ನಿಂದ ಸಮಾಜದಲ್ಲಿ ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿ ಕದಡುವ ಸಂಭವವಿರುತ್ತದೆ. ಹೀಗಾಗಿ, ದೀಪಕ್ ಸಿಂಗ್ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದರನ್ವಯ ದೀಪಕ್ ಸಿಂಗ್ ಅವರನ್ನು ಇಂದು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ..
Tags
ಶಿವಮೊಗ್ಗ