ಹಾಸನದಲ್ಲಿಂದು ಒಟ್ಟು 451 ಕರೋನ ಪಾಸಿಟಿವ್ ಪತ್ತೆ ಹಾಗೂ 9 ಸಾವು

 ಹಾಸನ: ಜಿಲ್ಲೆಯಲ್ಲಿ  ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 451 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು 9 ಜನ ಮೃತಪಟ್ಟಿದ್ದಾರೆ. 

ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 16799 ಕ್ಕೆ ಏರಿಕೆಯಾಗಿದ್ದು, 13044 ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 3424 ಸಕ್ರಿಯ ಪ್ರಕರಣಗಳಿದ್ದು, 48 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 3ಜನ ಮೃತಪಟ್ಟಿದ್ದಾರೆ.

Post a Comment

Previous Post Next Post