ಮಕ್ಕಳ ನೆರವಿಗಾಗಿ “ಬಾಲಹಿತೈಷಿ” ಮಾರ್ಗದರ್ಶಕರ ನೊಂದಣಿ

ಹಾಸನ ಜೂ.೧೭:- ರಾಜ್ಯದಲ್ಲಿ ಕೋವಿಡ್-೧೯ ವಿಪತ್ತಿನ ಹಿನ್ನಲೆಯಲ್ಲಿ ಬಾಧಿತ ಮಕ್ಕಳಿಗೆ ನೆರವು ನೀಡಲು ಸಮಾಜದಲ್ಲಿ ಅನೇಕರು ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದು, ಮಗುವಿನ ಪಾಲನೆ ಮತ್ತು ರಕ್ಷಣೆಯನ್ನು ಒದಗಿಸಲು ವಿಸ್ತೃತ ಕುಟುಂಬ/ಏಕಪೋಷಕರ  ನೆರವಿದ್ದರೂ, ಸಹ ತಂದೆ/ತಾಯಿಯನ್ನು ಕಳೆದುಕೊಂಡ ೧೮ ವರ್ಷದೊಳಗಿನ ಮಕ್ಕಳಿಗೆ ನೈತಿಕ, ಭಾವನಾತ್ಮಕ ಮತ್ತು ಸಾಮಾಜಿಕ ನೆರವನ್ನು ಒದಗಿಸಿ ಅವರನ್ನು ಮಾನಸಿಕ ಆಘಾತದಿಂದ ಹೊರತರಲು ಹಾಗೂ ಮಗುವಿನ ದೀರ್ಘಕಾಲಿಕ, ಸಕಾರಾತ್ಮಕ ಬೆಳವಣಿಗೆಗೆ ಮತ್ತು ಸರ್ವೋತೋಮುಖ ಅಭಿವೃದ್ಧಿಗೆ ಅನುವಾಗುವಂತೆ ಈ ಒಂದು ಯೋಜನೆಯು ಅತ್ಯವಶ್ಯಕವಾಗಿರುತ್ತದೆ.


ಈ ಹಿನ್ನಲೆಯಲ್ಲಿ ಕಷ್ಟದ ಸಂದರ್ಭಗಳಲ್ಲಿ ಮಗುವಿನ ಹಿತೈಷಿಗಳು ವ್ಯಕ್ತಪಡಿಸಿದ ಕಾಳಜಿಯು ಮಗು ಅನುಭವಿಸಿದ ನಷ್ಟ ಅಥವಾ ಆಘಾತವನ್ನು ನಿಭಾಯಿಸಲು ಸಹಕಾರಿಯಾಗಿದ್ದು, ಮಗುವಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ಶೈಕ್ಷಣಿಕ ಹಾಗೂ ಇತರ ಜೀವನ ಸನ್ನಿವೇಶಗಳಲ್ಲಿ ಮಾಡಬಹುದಾದ ಕಷ್ಟಕರ ನಿರ್ಧಾರಗಳನ್ನು ನಿರ್ವಹಿಸಲು ಮಕ್ಕಳಿಗೆ ಅವಶ್ಯಕ ಬೆಂಬಲ, ಸಹಾಯ ನೀಡಲು ಮತ್ತು ಮಗುವಿನ ಸರ್ವೋತೋಮುಖ ಬೆಳವಣಿಗೆಯನ್ನು ಬೆಂಬಲಿಸಿ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು “ಬಾಲಹಿತೈಷಿ'' (ಮಾರ್ಗದರ್ಶಕತ್ವ ಮೆಂಟರ್ಶಿಪ್) ಯೋಜನೆಯನ್ನು ಜಾರಿಗೊಳಿಸಲಾಗಿದೆ.

 ಅದರಂತೆ ಮೇಲೆ ತಿಳಿಸಿದಂತಹ ಸಮಸ್ಯಾತ್ಮಕ ಮಕ್ಕಳು ಜಿಲ್ಲೆಯಲ್ಲಿದ್ದು, ಸದರಿ ಮಕ್ಕಳಿಗೆ ಮಾರ್ಗದರ್ಶಕರಾಗಿ ನೋಂದಾಯಿಸಿಕೊಳ್ಳಲು ಉತ್ಸುಕರಾಗಿದ್ದಲ್ಲಿ ಅರ್ಜಿ ನಮೂನೆಯು (ಅನುಬಂಧ-೧) ನಿರ್ದೇಶನಾಲಯಯದ ವೆಬ್‌ಸೈಟ್ hಣಣಠಿs://iಛಿಠಿs.ಞಚಿಡಿಟಿಚಿಣಚಿಞಚಿ.gov.iಟಿನಲ್ಲಿ ಡಿಜಿಟಲ್ ಫಾರ್ಮ್ ಲಭ್ಯವಿದ್ದು, ಮಾರ್ಗದರ್ಶಕರಾಗಿ ನೋಂದಾಯಿಸಬಯಸುವವರು ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.  

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ. ಇವರನ್ನು ಸಂಪರ್ಕಿಸಬಹುದಾಗಿದೆ.


Post a Comment

Previous Post Next Post