ಚನ್ನರಾಯಪಟ್ಟಣ: ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿರುವ 40 ಅಡಿ ಎತ್ತರದ ಆಂಜನೇಯಸ್ವಾಮಿಗೆ ಬೃಹತ್ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು.
ಗುರುವಾರ ಬೆಳಿಗ್ಗೆ 6ಕ್ಕೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ರಾಮತಾರಕ ಹೋಮ ಮಾಡಿ ಪೂರ್ಣಾಹುತಿ ನೆರವೇರಿಸಲಾಯಿತು. ದೇವರಿಗೆ ಬೆಣ್ಣೆ ಅಲಂಕಾರ ಮತ್ತು ವೀಳ್ಳೆದೆಲೆ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಮಾಡಿದ್ದ ದ್ರಾಕ್ಷಿ ತೋಟದ ಅಲಂಕಾರ ಭಕ್ತರ ಗಮನ ಸೆಳೆಯಿತು.
ಭಕ್ತರು ಹಣ್ಣು, ಕಾಯಿ ಅರ್ಪಿಸಿ ಪೂಜೆ ಮಾಡಿದರು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ಎಂ.ಎಸ್. ವಿಶ್ವನಾಥ ದೀಕ್ಷಿತ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಸಂಜೆ ಗಾನಗಾರುಡಿ ಕಲಾವಿದರು ಭಾವಗೀತೆ, ಭಕ್ತಿಗೀತೆ ಹಾಗೂ ಜಾನಪದಗೀತೆ ಹಾಡಿದರು.ವಿನಾಯಕ ಕಾರು ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎ.ಎನ್. ಕುಮಾರಸ್ವಾಮಿ, ಅಧ್ಯಕ್ಷ ಬಸವರಾಜೇಗೌಡ, ಉಪಾಧ್ಯಕ್ಷ ನಾಗರಾಜು, ಸಿ.ಆರ್. ದಿನೇಶ್, ಕಾರ್ಯದರ್ಶಿ ಸಿ.ಜಿ. ಚರಣ್‍ಕುಮಾರ್, ಸಹಕಾರ್ಯದರ್ಶಿ ಸಿ.ವಿ. ವಿನಯ್, ಖಜಾಂಚಿ ಪ್ರಕಾಶ್ ಭಾಗವಹಿಸಿದ್ದರು.
Tags
ಚನ್ನರಾಯಪಟ್ಟಣ