ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯ ಮೂಲಕ ಇಡೀ ದೇಶಕ್ಕೆ ಪರಿಚಿತರಾದ ಯಶ್ ಅವರು, ಲಾಕ್ ಡೌನ್ ಆರಂಭವಾದ ಸಮಯದಿಂದ ತಮ್ಮದೇ ಆದ ಬಿಡುವಿನ ಸಮಯವನ್ನು ಪೂರ್ತಿ ಪ್ರಮಾಣದಲ್ಲಿ ತನ್ನ ಕುಟುಂಬಕ್ಕೆ ನೀಡಿದ್ದು, ಹೆಂಡತಿ ರಾಧಿಕಾ ಪಂಡಿತ್ ಹಾಗೂ ತಮ್ಮ ಮಕ್ಕಳ ಜೊತೆ ತುಂಬಾ ಸಂತಸದಿಂದ ಸಮಯ ಕಳೆದಿದ್ದರು. ಅಷ್ಟೇ ಅಲ್ಲದೆ ಇತ್ತೀಚಿಗೆ ರಾಕಿಂಗ್ ಜೋಡಿ, ತಮ್ಮ ಎರಡನೆಯ ಮಗುವಿನ ನಾಮಕರಣ ಸುದ್ದಿ ಮಾಡಿತ್ತು, ಮತ್ತು ಇದೆ ಹಿನ್ನೆಲೆಯಲ್ಲಿ ಮಗುವಿಗೆ ಯಾವ ಹೆಸರು ಇಡಬಹುದು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಕೂಡ ಮತ್ತೆ ಸುದ್ದಿ ಮಾಡಿತ್ತು, ಮತ್ತು ಯಶ್ ಅವರ ಅಭಿಮಾನಿಗಳು ಕೂಡ ಮಗನಿಗೆ ಯಾವ ಹೆಸರು ಇಡಬಹುದು ಎಂಬುದಾಗಿ ತುಂಬಾ ಕಾತರದಿಂದ ಕಾಯುತ್ತಿದ್ದರು. ಅಭಿಮಾನಿಗಳ ಕಾಯುವಿಕೆ ಪ್ರಕಾರ, ಇಂದು ನಟ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗನಿಗೆ ಯಥರ್ವ ಯಶ್ ಎಂದು ಹೆಸರಿಟ್ಟು ನಾಮಕರಣ ಮಾಡಿದ್ದಾರೆ, ನಾಮಕರಣದ ವೇಳೆ ಮಗುವನ್ನು ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ತುಂಬಾ ಸಂತಸದ ಮೂಲಕ ಪೂಜೆಯಲ್ಲಿ ಭಾಗಿಯಾಗಿದ್ದರು. ಅದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಜನರಿಗೆ ಕ್ಯೂಟ್ ಆಗಿ ಕಾಣುತ್ತಿದೆಯಂತೆ, ನೀವು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.
Tags
ಹಾಸನ
