ಡ್ರಗ್ ಮಾಫಿಯಾದವರು ಎಷ್ಟೇ ದೊಡ್ಡವರಿರಲಿ ಅವರ ವಿರುದ್ಧ ಕಠಿಣ ಕ್ರಮ : ವಿ.ಸೋಮಣ್ಣ ಖಡಕ್ ಎಚ್ಚರಿಕೆ

ಹಾಸನ: ಹಾಸನದಲ್ಲಿ ವಸತಿ ಸಚಿವ 
ವಿ.ಸೋಮಣ್ಣ ಖಡಕ್ ಎಚ್ಚರಿಕೆ
ಡ್ರಗ್ ಮಾಫಿಯಾದವರು ಎಷ್ಟೇ ದೊಡ್ಡವರಿರಲಿ ಅವರ ವಿರುದ್ಧ ಕಠಿಣ ಕ್ರಮ

ಕಾನೂನಿನ ಮುಂದೆ ಎಲ್ಲರೂ ಒಂದೆ

ಡ್ರಗ್ ಮಾಫಿಯಾ ತಾತ್ವಿಕ ಅಂತ್ಯ ಆಗೋವರೆಗೂ ಬಿಡಲ್ಲ

ಹಾಸನದಲ್ಲಿ ಡ್ರಗ್ ಮಾಫಿಯಾ ವಿರುದ್ಧ ಗುಡುಗಿದ ವಸತಿ ಸಚಿವ ಸೋಮಣ್ಣ

ಈ ದಂಧೆ ನೆನ್ನೆ ಮೊನ್ನೆಯದಲ್ಲ, ಹಲವು ವರ್ಷಗಳಿಂದ ನಡೆಯುತ್ತಿತ್ತು

ಇದನ್ನ ನಿಲ್ಲಿಸಲೇ‌ಬೇಕೆಂದು ನಮ್ಮ 
ಸರ್ಕಾರ, ಗೃಹ  ಸಚಿವರು ಮುಂದಾಗಿದ್ದಾರೆ

ಇಷ್ಟೊಂದು ದೃಢ ಹಾಗೂ ಕಠಿಣ ನಿರ್ಧಾರ ಎಂದೂ ಆಗಿಲ್ಲ

ಡ್ರಗ್ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿ ಇದೆ

ಸಿಎಂ ಗೃಹ ಸಚಿವರು ಈ ವಿಚಾರದಲ್ಲಿ ಗಂಭೀರವಾಗಿದ್ದಾರೆ

ಡ್ರಗ್ ದಂಧೆ ಕೊನೆಗಾಣಿಸಲು ಸರ್ಕಾರ ಗಂಭೀರ ವಾಗಿದೆ

ಡ್ರಗ್ ವಿಚಾರ ಮುಂದಿಟ್ಟು ಸರ್ಕಾರ 
ಜನರ ದಿಕ್ಕುತಪ್ಪಿಸುತ್ತಿದರ ಎಂಬ ಕೈ ನಾಯಕರ ಆರೋಪ ವಿಚಾರ

ಕಾಂಗ್ರೆಸ್ ನಾಯಕರ ವಿರುದ್ಧ ಸೋಮಣ್ಣ ವಾಗ್ದಾಳಿ

ಕಾಂಗ್ರೆಸ್ ಗೆ ಏನು ಕೆಲಸ ಇದೆ ಹೇಳಿ,ಪಾಪ ಅವರು ತೊಳಲಾಟದಲ್ಲಿ ಇದ್ದಾರೆ

ಅವರಲ್ಲೇ ಸುಮಾರು ಗುಂಪಾಗಿದೆ,

ಎತ್ತು ಏರಿಗೆ ಕೋಣ ನೀರಿಗೆ ಎನ್ನೋ
ಸ್ಥಿತಿ ಇದೆ ಎಂದು ಲೇವಡಿ
 


ಹಾಸನದಲ್ಲಿ ಸಚಿವ ವಿ ಸೋಮಣ್ಣ ಹೇಳಿಕೆ

ಕಾಂಗ್ರೆಸ್ ನವರು ದಿಗ್ಭ್ರಾಂತರಾಗಿದ್ದಾರೆ, ಏನು ಮಾಡೋಕೆ ಆಗುತ್ತಿಲ್ಲ

ರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಕೆಲಸ ನೋಡಿ ಕಾಂಗ್ರೆಸ್ ನಾಯಕರಿಗೆ ದಿಗ್ಭ್ರಮೆಯಾಗಿದೆ

ದೇಶದಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದರೆ ಅದು ಕಾಂಗ್ರೆಸ್ ಎಂದು ಕಿಡಿ

Post a Comment

Previous Post Next Post