ಮುಸ್ಲಿಂ ಹಾಸ್ಟೇಲ್ ನ್ನು ಕೋವಿಡ್ ಕೇರ್ ಸೆಂಟ್ರಾಗಿ ಪರಿವರ್ತನೆ ೬೦ ರಿಂದ ೧೦೦ ಬೆಡ್ ಗೂ ಅವಕಾಶ.

ಹಾಸನ : ನಗರದ ಕೆ.ಅರ್ ಪುರಂನ ಬಳಿ ಇರುವ ಮುಸ್ಲಿಂ ಹಾಸ್ಟೆಲ್ ನ್ನು ನ್ಯಾಷನಲ್ ಹ್ಯೂಮನ್ ರೈಟ್ಸ್ ವೆಲ್ಫೇರ್ ಸಂಸ್ಥೆಯ ವತಿಯಿಂದ ಕೋವಿಡ್ ಕೇರ್ ಸೆಚಿಟರ್ ಆಗಿ ಪರಿವರ್ತನೆ ಮಾಡಲಾಗಿದ್ದು, ಈಗ ಸದ್ಯಕ್ಕೆ ೬೦ ಬೆಡ್ ಗಳಿಗೆ ಅವಕಾಶ ಕೊಡಲಾಗಿದ್ದು, ಮುಂದೆ ೧೦೦ ಹಾಸಿಗೆಗೂ ಅವಕಾಶ ಕೊಡಲಾಗುವುದು ಎಂದು ಸಂಸ್ಥೆಯ ರಾಜ್ಯಾಧ್ಯಕ್ಷ ಇಮ್ರಾನ್ ಖಾನ್ ತಿಳಿಸಿದರು.


      ಪತ್ರಿಕಾಗೋಷ್ಠೀಯಲ್ಲಿ ಬುಧವಾರದಂದು ಮಾತನಾಡಿದ ಅವರು, ಕೊರೋನಾ ಎಂಬ ಮಹಾಮಾರಿ ಆವರಿಸಿ ಪ್ರತಿ ದಿನ ಸಾವಿರಾರು ಮಂದಿಗೆ ಸೋಂಕು ಹರಡುವುದಲ್ಲದೇ ಸಾವು ಕೂಡ ಸಂಭವಿಸುತ್ತಿದೆ. ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ಎದುರಾಗಿರುವುದರಿಂದ ಇದನ್ನರಿತು ಮುಸ್ಲಿಂ ಹಾಸ್ಟೇಲನ್ನು ಕೋವಿಡ್ ಸೆಂಟರ್ ನ್ನಾಗಿ ಪರಿವರ್ತಿಸಲಾಗಿದೆ ಎಂದರು. ಸರ್ಕಾರದ ಮೇಲೆ ಒತ್ತಡ ಹೇರದೆ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿದರೆ ಜನರ ಪ್ರಾಣವನ್ನು ಇನ್ನಷ್ಟು ಉಳಿಸಬಹುದಾಗಿದೆ. ಅದಕ್ಕಾಗಿ ನ್ಯಾಷನಲ್ ಹ್ಯುಮನ್ ರೈಟ್ಸ್ ಸಂಸ್ಥೆ ನಗರದ ಮುಸ್ಲಿಂ ಹಾಸ್ಟೆಲ್ ಬಳಸಿ ಕೊವಿಡ್ ಕೇರ್ ಕೇಂದ್ರ ಪ್ರಾರಂಭಿಸಲಾಗಿದೆ. ಇಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದ್ದು, ೩ ಶಿಫ್ಟಿನಲ್ಲಿ ನೋಡಿಕೊಳ್ಳಲಾಗುವುದು. ಈಗಾಗಲೇ ಮೂವರು ವೈದ್ಯರನ್ನು ನೇಮಕ ಮಾಡಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಹಾಸಿಗೆಯನ್ನು ಸಿದ್ಧಪಡಿಸಲಾಗಿದೆ. ಒಬ್ಬ ಕೊರೋನಾ ಪಾಸಿಟಿವ್ ವ್ಯಕ್ತಿ ಬಂದರೇ ಒಂದು ದಿನಕ್ಕೆ ಬೆಡ್ ಚಾರ್ಜ್ ೨೫೦೦, ಮತ್ತು ವೈದ್ಯರ ಭೇಟಿ ಮಾಡಿದ ಧರ ಸೇರಿ ಒಟ್ಟು ೫ ಸಾವಿರ ರೂ ವೆಚ್ಚ ತಗಲುತ್ತದೆ. ಇಲ್ಲಿ ಯಾವುದೇ ವಸೂಲಿ ಮಾಡಲಾಗುವುದಿಲ್ಲ. ಕೋವಿಡ್ ಸೆಂಟರ್ ನ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತೆ ಕೋರಿದರು.

       ಕೋವಿಡ್ ಸೆಂಟರ್ ನ ಉಪಯೋಗ ಬೇಕಾದವರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ. ನ್ಯಾಷನಲ್ ಹ್ಯೂಮನ್ ರೈಟ್ಸ್ ವೆಲ್ಫೇರ್ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಇಮ್ರಾನ್ ಖಾನ್ ಮೊ.೯೮೪೪೦೦೩೭೮೬, ಜಿಲ್ಲಾಧ್ಯಕ್ಷ ರೆಹಮನ್ ಖಾನ್ ಮೊ. ೯೮೮೬೨೧೭೮೬೨, ನಗರಾಧ್ಯಕ್ಷ ಸಮೀರ್ ಮೊ. ೯೪೪೮೮೯೫೨೬೫ ಈ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.

       ಪತ್ರಿಕಾಗೋಷ್ಠಿಯಲ್ಲಿ ನ್ಯಾಷನಲ್ ಹ್ಯೂಮನ್ ರೈಟ್ಸ್ ವೆಲ್ಫೇರ್ ಸಂಸ್ಥೆಯ ಜಿಲ್ಲಾಧ್ಯಕ್ಷ ರೆಹಮನ್ ಖಾನ್, ನಗರಾಧ್ಯಕ್ಷ ಸಮೀರ್, ಸಯ್ಯಾದ್ ನಾಹಿತ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post