ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಜನ್ಮದಿನ ಪೌರಕಾರ್ಮಿಕರಿಗೆ ಪುಡ್ ಕಿಟ್ ವಿತರಣೆ

ಹಾಸನ: ನಗರದ ಎವಿಕೆ ಕಾಲೇಜು ರಸ್ತೆ, ಇಂಡಿಯನ್ ಬ್ಯಾಂಕ್ ಹಿಂಬಾಗ ಇರುವ ಕರವೇ ಜಿಲ್ಲಾ ಕಛೇರಿ ಮುಂಬಾಗ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ೫೫ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಜಿಲ್ಲಾಧ್ಯಕ್ಷರಾದ ಸಿ.ಡಿ. ಮನುಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ಮತ್ತು ಹಾಸ್ಟೇಲ್ ನಲ್ಲಿ ಕೆಲಸ ಮಾಡುವವರಿಗೆ ಪ್ರತಿನಿತ್ಯ ಅಗತ್ಯವಾಗಿ ಬೇಕಾಗಿರುವ ಆಹಾರ ಸಾಮಾಗ್ರಿಯನ್ನು ನೀಡುವುದುರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು


.

      ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ೫೫ನೇ ವರ್ಷದ ಜನ್ಮ ದಿನದ ಅಂಗವಾಗಿ ಕೋವಿಡ್ ಸಂದರ್ಭದಲ್ಲಿ ನೊಂದಿರುವ ಪೌರಕಾರ್ಮಿಕರಿಗೆ ಮತು ಹಾಸ್ಟೇಲ್ ನಲ್ಲಿ ಕೆಲಸ ಮಾಡುವ ಅನೇಕ ಕುಟುಂಬಗಳಿಗೆ ಪುಡ್ ಕಿಟ್ ವಿತರಣೆ ಮಾಡುವುದರ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇದೆ ತಿಂಗಳು ೨೧ ರಂದು ಉಚಿತ ಲಸಿಕೆ ಕೊಡುವುದಾಗಿ ಹೇಳಿದ್ದಾರೆ ಆ ಲಸಿಕೆಯನ್ನು ೩ನೇ ಅಲೆ ಬರುವುದರ ಮುಂಚಿತವಾಗಿ ಕೊಡಬೇಕು ಎನ್ನುವ ಅಧ್ಯಾಯಾನವನ್ನು ಕೇಂದ್ರ ಸರಕಾರಕ್ಕೆ ತಿಳಿಸುವ ನಿಟ್ಟಿನಲ್ಲಿ ನಾವುಗಳು ಪ್ರಾರಂಭಿಸಿದ್ದೇವೆ. ಜಿಲ್ಲೆ, ತಾಲೂಕು ಮತ್ತು ಹೋಬಳಿಗಳಲ್ಲಿ ಕರವೇ ತಂಡ ತೆರಳಿ ಸಾಮಾಜಿಕ ಅಂತರ ಮತತು ಕಡ್ಡಾಯ ಮಾಸ್ಕ್ ಬಳಕೆ ಮಾಡುವಂತೆ ಅಧ್ಯಾಯನ ಮಾಡಲಾಗುತ್ತಿದೆ ಎಂದು ಹೇಳಿದರು. 

     ಇದೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಸೀತರಾಮ್, ತನುಗೌಡ, ಕಾರ್ಮಿಕ ಘಟಕದ ಬೋರೆಗೌಡರು, ಯುವ ಘಟಕದ ಪ್ರೀತಮ್, ಅಭಿಗೌಡ, ರೇಖಾ ಮಂಜುನಾಥ್, ದೇವಿಕಾ ಮಧು, ತೌಫಿಕ್ ಪಾಷಾ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post