ಹಾಸನ: ಈ ಹಿಂದೆ ಹೇಳಿದಂತೆ ಒಂದು ವಾರಕ್ಕೆ ಆಗುವಷ್ಟು ಸುಮಾರು ೯೦೦ ಸಲಿಂಡರ್ ಆಮ್ಲಜನಕವನ್ನು ಹಾಸನಕ್ಕೆ ಪೂರೈಕೆ ಮಾಡಿರುವ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ನೀಡಿರುವ ೧೨೦೦ ಮೆಟ್ರಿಕ್ ಟನ್ ಆಮ್ಲಜನಕದಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡರವರು ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಿAದ ಹಾಸನಕ್ಕೆ ೮ಕಿಲೋ ಲಿಕ್ವಿಡ್ ಆಮ್ಲಜನಕ ಪೂರೈಕೆಯಾಗಿದ್ದು, ಮುಂದಿನ ಒಂದು ವಾರಗಳ ಕಾಲಕ್ಕೆ ಯಾವ ಸಮಸ್ಯೆ ಆಗದಂತೆ ಸುಮಾರು ೯೦೦ ಸಿಲಿಂಡರ್ ಆಮ್ಲಜನಕ ಪೂರೈಕೆ ಮಾಡಲಾಗಿದೆ. ಬೆಂಗಳೂರಿನ ಬರುಕ ಆಕ್ಸಿಜನ್ ಪ್ಯಾಂಟಿನಿAದ ಕಳುಹಿಸಿಕೊಡಲಾಗಿದೆ. ಒಟ್ಟಾರೆ ಹಾಸನದಲ್ಲಿ ಕೊರತೆಯಿದ್ದ ಆಕ್ಸಿಜನ್ ನೀಗಿಸುವಲ್ಲಿ ಶಾಸಕರು ಯಶಸ್ವಿ ಆಗಿದ್ದಾರೆ.
Tags
ಹಾಸನ