ಮತ್ತೆ ಒಂದಾಗ್ತಿದೆ ಮಮ್ಮಿ ಜೋಡಿ.. 'ಲೈಫ್ ಈಸ್ ಬ್ಯೂಟಿಫುಲ್' ಪ್ರಿಯಾಂಕಾ ಉಪೇಂದ್ರ ಎಂಟ್ರಿ.

ನಿರ್ದೇಶಕ ಲೋಹಿತ್​ ಚೊಚ್ಚಲ ಪ್ರೊಡಕ್ಷನ್​ನಲ್ಲಿ ಮೂಡಿ ಬರ್ತಿರೋ ಸಿನಿಮಾ ‘ಲೈಫ್​ ಈಸ್​ ಬ್ಯೂಟಿಫುಲ್.’ ಸದ್ಯ ಈ ಸಿನಿಮಾಗೆ ಹೊಸ ಸೇರ್ಪಡೆಯೊಂದು ಆಗಿದ್ದು, ಈ ಬಗ್ಗೆ ಲೋಹಿತ್​ ಬಹಳ ಖುಷಿಯಿಂದ ಬರೆದುಕೊಂಡಿದ್ದಾರೆ. ಹೌದು.. ಯಾಕಂದ್ರೆ, ‘ಲೈಫ್​ ಈಸ್​ ಬ್ಯೂಟಿಫುಲ್’​ ಟೀಂ ಸೇರಿಕೊಂಡಿರೋದು ಬೇರೆ ಅಲ್ಲ, ನಿರ್ದೇಶಕ ಲೋಹಿತ್​ ಚೊಚ್ಚಲ ಚಿತ್ರ ‘ಮಮ್ಮಿ ಸೇವ್​ ಮಿ’ ಸಿನಿಮಾದ ನಾಯಕಿ ಪ್ರಿಯಾಂಕಾ ಉಪೇಂದ್ರ. ‘ಕೆರೋಲಿನ್’​ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದು, ಕೆರೋಲಿನ್​ಗೆ​ ಥ್ಯಾಂಕ್ಯೂ ಅಂದಿದ್ದಾರೆ ನಿರ್ದೇಶಕ ಲೋಹಿತ್​.

ದೇವಕಿ’ ಸಿನಿಮಾದ ನಂತರ ಪ್ರಿಯಾಂಕಾ ಉಪೇಂದ್ರ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಸದ್ಯ ಪ್ರಿಯಾಂಕಾ ‘ಲೈಫ್​ ಈಸ್​ ಬ್ಯೂಟಿಫುಲ್’​ ಸಿನಿಮಾದಲ್ಲಿ ನಟಿಸುತ್ತಿರೋದನ್ನ ರಿವೀಲ್​ ಮಾಡಿದ್ದಾರೆ ಲೋಹಿತ್​.

‘ನನ್ನ ನಿರ್ದೇಶನದ ಮೊದಲ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಅವರು ನಾಯಕಿ ಆದ ಹಾಗೇ, ಮತ್ತೆ ನನ್ನ ಚೊಚ್ಚಲ ಪ್ರೊಡಕ್ಷನ್​ನ ಚಿತ್ರ ‘ಲೈಫ್​ ಈಸ್​ ಬ್ಯೂಟಿಫುಲ್’​ನಲ್ಲೂ ಅವರು ನಟಿಸುತ್ತಿರೋದು ನನಗೆ ಬಹಳ ಖುಷಿಯಾಗ್ತಿದೆ. ನನ್ನ ಸಿನಿ ಬದುಕಿನ ಪಯಣದ ಹಂತ ಹಂತದಲ್ಲೂ ಅವರ ಸಪೋರ್ಟ್​ ಸಿಗ್ತಿರೋದು ತುಂಬಾ ಸಂತೋಷ ನೀಡ್ತಿದೆ. ನನ್ನ ಚೊಚ್ಚಲ ನಿರ್ದೇಶನದ ಚಿತ್ರ ‘ಮಮ್ಮಿ ಸೇವ್​ ಮಿ’ಯಿಂದಲೂ ಅವರ ಸಪೋರ್ಟ್​ ತುಂಬಾ ಇದೆ, ಆಗಿನ್ನೂ ನಾನು ಪ್ರಯತ್ನದ ಹಂತದಲ್ಲಿದ್ದೆ. ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಯಾವಾಗಲೂ ಸಪೋರ್ಟ್​ ಮಾಡಿ ನನ್ನ ‘ಲೈಫ್​ ಬ್ಯೂಟಿಫುಲ್’​ ಮಾಡಿದ್ದಕ್ಕೆ ನಿಮಗೆ ನಾನು ಯಾವಾಗಲೂ ಚಿರರುಣಿ ಪ್ರಿಯಾಂಕಾ ಮೇಡಮ್’ ಅಂತಿದ್ದಾರೆ ಲೋಹಿತ್​ ಮನು.

ಇನ್ನು, ‘ಲೈಫ್​ ಈಸ್​ ಬ್ಯೂಟಿಫುಲ್’​ ಸಿನಿಮಾದಲ್ಲಿ ದಿಯಾ ಚಿತ್ರದ ನಾಯಕ ಪೃಥ್ವಿ ಅಂಬರ್​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರ ‘ಕೆರೋಲಿನ್’​​ ಪಾತ್ರದ ಫಸ್ಟ್​ ಲುಕ್​ ಆದಷ್ಟು ಬೇಗ ರಿವೀಲ್​ ಮಾಡೋದಾಗಿ ಲೋಹಿತ್​ ತಿಳಿಸಿದ್ದಾರೆ. ಅರುಣ್​ ಕುಮಾರ್​ ಹಾಗೂ ಸಬೂ ಅಲೋಶಿಯಸ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳ್ತಿದ್ದು, ಕಿಶೋರ್​ ನರಸಿಂಹ ಹಾಗೂ ಬಿಜಿ ಅರುಣ್​ ಹೂಡಿಕೆ ಮಾಡಿದ್ದಾರೆ. ಚಿತ್ರದ ಶೂಟಿಂಗ್​ ಸದ್ಯ ಬೆಂಗಳೂರಿನ ರಾಮೋಹಳ್ಳಿಯ ಫಾರ್ಮ್​ಹೌಸ್​ವೊಂದರಲ್ಲಿ ನಡೆಯುತ್ತಿದೆ. ಪ್ರಿಯಾಂಕಾ ಉಪೇಂದ್ರ ತಮ್ಮ ಭಾಗದ ಶೂಟಿಂಗ್​ ಶುರು ಮಾಡಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

Post a Comment

Previous Post Next Post