ಸರಳವಾಗಿ ಗಾಂಧೀ ಜಯಂತಿ ಆಚರಣೆ: ಡಾ. ಹೆಚ್.ಎಲ್. ನಾಗರಾಜ್

ಕೋವಿಡ್-೧೯ ಹಿನ್ನೆಲೆ ಈ ಬಾರಿಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಕಾರ್ಯಕ್ರಮವನ್ನು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್. ನಾಗರಾಜ್ ಅವರು ಹೇಳಿದರು. 
    ಅವರು ಇಂದು ತಮ್ಮ ಕಛೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
  ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿದ್ದು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಜಿಲ್ಲಾಡಳಿತವು ಅಗತ್ಯ ಮುಂಜಾಗ್ರತೆಗಳನ್ನು ಕೈಗೊಂಡು ಅಕ್ಟೋಬರ್ ೦೨ರಂದು  ಜಿಲ್ಲಾಧಿಕಾರಿಗಳ ಕಛೇರಿ ಆವರಣದ ಗಾಂಧಿ ಪುತ್ಥಳಿಯ ಬಳಿ ಜಯಂತಿ ಕಾರ್ಯಕ್ರಮವನ್ನು ಅತ್ಯಂತ  ಸರಳವಾಗಿ ಆಚರಿಸಲಾಗುವುದು ಹಾಗೂ ಆಯ್ದ ಕೆಲವು ಶಾಲಾ ಮಕ್ಕಳಿಂದ ಗಾಂಧೀಜಿ ಅವರ ನೆಚ್ಚಿನ ರಘುಪತಿ ರಾಘವ ರಾಜರಾಮ್ ಭಜನಾ ಪದಗಳನ್ನು ಹಾಡಿಸಲಾಗುವುದು ಎಂದರು. 
  ಸಭೆಯಲ್ಲಿ ತಹಶೀಲ್ದಾರ್ ಡಾ. ಕಾಂತರಾಜ್, ಚಿಕ್ಕಮಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಹೆಚ್.ಪಿ. ಮಂಜುಳಾ ಹುಲ್ಲಹಳ್ಳಿ, ನಗರ ಸಭೆ ಪೌರಾಯುಕ್ತ ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post