ಅರಕಲಗೂಡು: ಅನಾರೋಗ್ಯದಿಂದ ನಿಧನರಾದ ಹಾಸನದ ಹೆಸರಾಂತ ಮಕ್ಕಳ ತಜ್ಞವೈದ್ಯ ದಿ. ಡಾ. ರಾಜೀವ್ ಅವರ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಡಾ. ವಿ. ರಾಜೀವ್ ವೃತ್ತ ನಾಮಫಲಕ ಅನಾವರಣ ಗೊಳಿಸಲಾಯಿತು.
ಡಾ. ರಾಜೀವ್ ಅವರ ಸ್ವಗ್ರಾಮ ಜಿಟ್ಟೇನಹಳ್ಳಿ ಗ್ರಾಮಕ್ಕೆ ಸಾಗುವ ಕಾಳೇನಹಳ್ಳಿ ಕರ್ಣಾಟಕ ಬ್ಯಾಂಕ್ ಮುಂಭಾಗ ಡಾ. ವಿ. ರಾಜೀವ್ ಭಾವಚಿತ್ರ ಹಾಕಿ ಅವರ ನೆನಪಾರ್ಥವಾಗಿ ವೃತ್ತಕ್ಕೆ ನಾಮಫಲಕ ಅನಾವರಣ ಮಾಡಲಾಯಿತು.
ಡಾ. ರಾಜೀವ್ ಪುಣ್ಯಸ್ಮರಣೆ ಪ್ರಯುಕ್ತ ಜಿಟ್ಟೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಸಾಮೂಹಿಕ ಅನ್ನ ಸಂತರ್ಪಣೆ ನಡೆಸಿದರು.
ಯುವ ಮುಖಂಡರಾದ ದಿನೇಶ್, ಆನಂದ, ಗಿರಿಗೌಡ, ಶ್ರೀಕಂಠೇಗೌಡ, ಬೇಬಿ, ಬೋರೇಗೌಡ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Tags
ಅರಕಲಗೂಡು