ಚಿಕ್ಕಮಗಳೂರ :ಕುಡಿದ ಅಮಲಿನಲ್ಲಿ ತಂದೆಯನ್ನೇ ಮಗ ಕಡಿದಿದ್ದು ತೀವ್ರ ಗಾಯಗೊಂಡಿರುವ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ .
ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಚೆನ್ನಡಲು ವಾಸಿ ಸುಂದರ ಪೂಜಾರಿ ಒಂದು ವರ್ಷದಿಂದ ಪಾರ್ಶುವಾಯು ಕಾಯಿಲೆಯಿಂದ ನರಳುತ್ತಿದ್ದರು.
ಕಳೆದ ವರ್ಷ ಬಿದ್ದ ಭಾರಿ ಮಳೆಗೆ ಈ ಕುಟುಂಬ ಬೀದಿ ಪಾಲಾಗಿತ್ತು ಸ್ಥಳೀಯರೆಲ್ಲ ಸೇರಿ ಆರ್ಥಿಕ ನೆರವು ಕಲ್ಪಿಸಿದ್ದರು .ಎರಡು ಅಂಗವಿಕರ ಮಕ್ಕಳಿಗೆ ಕೂಡಿಟ್ಟ ಹಣಕ್ಕೆ ಮಗ ನಿತೇಶ್ ಪೀಡಿಸುತ್ತಿದ್ದ .
ತಾಯಿ ಬಳಿ ಜಗಳ ಮಾಡಿ ಆಕೆಯನ್ನು ಮೂಲೆಗೆ ದೂಡಿ ತಂದೆಯ ತಲೆಗೆ ಕೊಡಲಿಯಿಂದ ಹೊಡೆದು ತೀವ್ರ ಗಾಯಗೊಳಿಸಿದ್ದಾನೆ .
ಕಾರಿನಲ್ಲಿ ತಾನೇ ಹೋಗಿ ಕೊಡ್ಲಿ ಸಮೇತ ಪೊಲೀಸರಿಗೆ ಶರಣಾಗಿದ್ದಾನೆ .
ಮೂಡಿಗೆರೆ ತಾಲೂಕಿನ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.