ಬೇಲೂರು:
ಇಲ್ಲಿ ದಲಿತಪರ, ಪ್ರಗತಿಪರ ಚಿಂತಕರಿಂದ ಸಂವಿಧಾನ ದಿನವನ್ನು ಆಚರಿಸಲಾಯಿತು. ಪಟ್ಟಣದ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಾತನಾಡಿದ ಜಿಲ್ಲಾ ಪರಿಷತ್ತು ಮಾಜಿ ಸದಸ್ಯ ಮರಿಯಪ್ಪ, ೧೯೪೯ ರ ನವೆಂಬರ್ ೨೬ ರಂದು ದೇಶಕ್ಕೆ ಸಂವಿಧಾನ ನೀಡಿದ ದಿನವಾಗಿದ್ದು ಈ ಸಂವಿಧಾನ ಧರ್ಮಗ್ರಂಥ, ಕಾನೂನು ಗ್ರಂಥವಾಗಿದೆ. ಇದರನ್ವಯ ನಾವು ನಡೆದುಕೊಂಡರೆ ದೇಶದಲ್ಲಿ ಶಾಂತಿ ನೆಲಸುತ್ತದೆ. ಎಲ್ಲಾ ಸಮೂಹದ ಜನರಿಗೂ ನ್ಯಾಯ ದೊರೆಯಲಿದೆ. ಈ ಸಂವಿಧಾನದೊಳಗಿನ ಕಾನೂನನ್ನು ಅರ್ಥ ಮಾಡಿಕೊಂಡು ಈ ದೇಶದನ ಜನ ಬದುಕು ಸಾಗಿಸಿದ್ದೇ ಆದಲ್ಲಿ ಎಲ್ಲೂ ಸಹ ಅಸಮಾನತೆ, ಅಹಿತಕರ ಘಟನೆ ನಡೆಯುವುದಿಲ್ಲ ಎಂದು ಹೇಳಿದರು.
ಬೇಲೂರಿನಲ್ಲಿ ಸಂವಿಧಾನ ದಿನವನ್ನು ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು |
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಲಕ್ಷö್ಮಣ್ ಮಾತನಾಡಿ, ಇಂದು ನಾವು ಉತ್ತಮ ಸ್ಥಾನಮಾನ ಪಡೆದಿದ್ದರೆ ಅದಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣವಾಗಿದೆ. ಪ್ರಪಂಚವೆ ಮೆಚ್ಚುವಂತ ಸಂವಿಧಾನವನ್ನು ಕೊಟ್ಟಂತ ದಿನವಾಗಿದೆ. ಸಮಾನ ನಾಗರೀಕ ಹಕ್ಕು ನೀಡಿದ ದಿನವಾಗಿದೆ ಎಂದರು. ಈ ಸಂದರ್ಭ ದಲಿತ ಮುಖಂಡರಾದ ಎನ್.ಯೋಗೇಶ್, ಪತ್ರಕರ್ತ ಸಂಘದ ಅಧ್ಯಕ್ಷ ಡಿ.ಬಿ.ಮೋಹನಕುಮಾರ್, ಪ್ರಮುಖರಾದ ಈಶ್ವರ್‌ಪ್ರಸಾದ್, ಹೊಸಳ್ಳಿರಾಜು, ಮಂಜುನಾಥ್, ತೀರ್ಥಕುಮಾರ್, ಬಾಬು, ಜಗದೀಶ್, ಜೀವನ್, ಕೃಷ್ಣಯ್ಯ, ಲಕ್ಷö್ಮಣ್, ಪುಟ್ಟರಾಜು ಇತರರು ಇದ್ದರು.