ಡ್ರಗ್ ಪ್ರಕರಣದಲ್ಲಿ ಈಗೀಗ ಘಟಾನುಘಟಿಗಳ ಹೆಸರು ಕೇಳಿ ಬರುತ್ತಿದೆ. ರಾಗಿಣಿ ಸಂಜನಾ ಈಗಾಗಲೇ ಜೈಲಿನಲ್ಲಿ ಇದ್ದಾರೆ. ನಟ ದಿಗಂತ್ ಮತ್ತು ಐಂದ್ರಿತಾ ಗೆ ಸಿಸಿಬಿ ನೋಟಿಸ್ ಕಳಿಸಿ ಅವರು ವಿಚಾರಣೆಯನ್ನು ಎದುರಿಸಿದ್ದರು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಮೂವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ನಟ, ಖ್ಯಾತ ನಿರೂಪಕ ಅಕುಲ್ ಬಾಲಾಜಿ, ಯುವರಾಜ್ ಆರ್.ವಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ಕುಮಾರ್‍ಗೆ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಮಾಜಿ ಶಾಸಕ ಆರ್.ವಿ ದೇವರಾಜ್ ಮಗನಾಗಿರುವ ಯುವರಾಜ್ ಆರ್. ವಿ ಸುದಾಮನಗರದ ಕಾರ್ಪೋರೇಟರ್. ಈ ಹಿಂದೆ ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿಯೂ ಯುವರಾಜ್ ಹೆಸರು ಕೇಳಿ ಬಂದಿತ್ತು. ಹೀಗಾಗಿ ಅಂದು ಸಿಸಿಬಿ ಪೊಲೀಸರು ಯುವರಾಜ್ ಬಳಿ ಹೇಳಿಕೆ ಪಡೆದು ವಾಪಸ್ ಕಳುಹಿಸಿದ್ದರು.
Tags
ಸಿನಿಮಾ