ಕೊರೋನಾ ಹೆಸರಿನಲ್ಲಿ ಜನರನ್ನು ವಂಚಿಸುವ ಖಾಸಗಿ ಆಸ್ಪತ್ರೆಗಳ ನೀತಿ ಖಂಡಿಸಿ ಡಿ.ವೈ.ಎಫ್.ಐ ವತಿಯಿಂದ ಮಂಗಳೂರಿನ ಆರೋಗ್ಯಾಧಿಕಾರಿ ಕಛೇರಿ ಮುಂಭಾಗ ಅಣುಕು ಶವ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಯಿತು .
ರೋಗಿಗಳನ್ನು ಕೊರೋನಾ ಚಿಕಿತ್ಸೆ ಹೆಸರಲ್ಲಿ ವಂಚಿಸಿದ ಖಾಸಗೀ ಆಸ್ಪತ್ರೆಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ , ಎಲ್ಲಾ ಸೋಕಿಂತರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ , ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು .
ಪ್ರತಿಭಟನಾಕಾರರನ್ನುದ್ದೇಶಿಸಿ ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ಮಿಯಾಜ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು . ಡಿ.ವೈ.ಎಫ್.ಐ ಜಿಲ್ಲಾ ಮುಖಂಡರಾದ ಸಾದಿಕ್ ಕಣ್ಣೂರು , ನಿತಿನ್ ಕುತ್ತಾರ್ , ನವೀನ್ ಬಿ . , ಮನೋಜ್ ವಾಮಂಜೂರು , ಅಶ್ರಫ್ ಕೆ.ಸಿ. ರೋಡ್ , ಆಶಾ ಬೋಳೂರು , ಪ್ರಮೀಳಾ ದೇವಾಡಿಗ , ಸುನಿಲ್ ತೇವುಲ , ಚರಣ್ ಶೆಟ್ಟಿ , ತುಳಸೀದಾಸ್ ವಿಟ್ಲ , ಎಸ್.ಎಫ್.ಐ ಮುಖಂಡರಾದ ಮಾಧುರಿ ಬೋಳಾರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು .
Tags
ರಾಜ್ಯ