ಪೋಷಕರೇ ಮಕ್ಕಳ ಮೇಲೆ ನಿಗಾವಹಿಸಿ ಎಸ್ಪಿ ಶ್ರೀನಿವಾಸ್ ಗೌಡ ಕೋರಿಕೆ

ಹಾಸನ : ಪ್ರಸ್ತುತ ದಿನಗಳಲ್ಲಿ ಮಾದಕ ವಸ್ತುವಾಗಿ ನಶೆ ಏರಿಸುವ ಪದಾರ್ಥಗಳನ್ನು ಯುವಕರು ಬಳಕೆ ಮಾಡುತ್ತಿರುವುದು ಹೆಚ್ಚಾಗಿರುವುದರಿಂದ ಪೋಷಕರು ಮಕ್ಕಳ ಮೇಲೆ ನಿಗಾವಹಿಸಿ ಪ್ರೇಮರಿ ಹಂತದಲ್ಲೆ ತಡೆಯಲು ಮುಂದಾಗಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹೀಗೋಂದು ಮನವಿ ಮಾಡಿದ್ದಾರೆ.
        ತಮ್ಮ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುವಾಗಿ ನಶೆ ಏರಿಸುವ ಪಾಸ್ಟ್ ಗಮ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಸಿಗುವ ಸಿರಪ್ ಇತರೆ ಔಷಧಗಳನ್ನು ಯುವಕರು ಬಳಸುತ್ತಿರುವುದು ಹೆಚ್ಚಾಗುತ್ತಿದೆ. ಮನೆಯಲ್ಲಿ ಪೆÇೀಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು. ಏನಾದರೂ ಈ ರೀತಿ ವಸ್ತುಗಳನ್ನು ಮಕ್ಕಳು ಬಳಸುತ್ತಿದ್ದರೆ ಅವರಿಗೆ ತಿಳುವಳಿಕೆ ಮಾತುಗಳನ್ನು ಹೇಳಿ ಇಂತಹ ದುಶ್ಚಟದಿಂದ ದೂರ ಇರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ಮೆಡಿಕಲ್ ಶಾಪ್ ಗಳಲ್ಲಿ ಇಂತಹ ಔಷಧ ಮಾರಾಟವನ್ನು ವೈದ್ಯರ ಸರಿಯಾದ ಚೀಟಿ ಇಲ್ಲದೆ ಯಾರಿಗೂ ನೀಡಬಾರದು ಎಂದು ಈಗಾಗಲೇ ಮಾಹಿತಿ ಕೊಡಲಾಗಿದೆ ಎಂದರು. 
      ಜಿಲ್ಲೆಯಲ್ಲಿ ಇಂದಿನ ದಿನಗಳಲ್ಲಿ ಗಾಂಜಾ ಮಾರಾಟ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡು ಭಾಗ ಹಾಗೂ ಜಿಲ್ಲೆಯ ಇತರೆಡೆ ಇರುವ ರೆಸಾರ್ಟ್ ಹಾಗೂ ಹೋಂಸ್ಟೇಗಳ ಮಾಲೀಕರಿಗೆ ಸಭೆ ಕರೆದು ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಹಾಗೂ ರೇವ್ ಪಾರ್ಟಿ ಸೇರಿದಂತೆ ಇತರೆ ಯಾವುದೇ ಮನೊರಂಜನೆ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಖಡಕ್ ಸೂಚನೆ
ನೀಡಿರುವುದಾಗಿ ತಿಳಿಸಿದರು. ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್‍ಗಳಿಗೆ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಮತ್ತು ವೀಕೆಂಡ್ ಸಂದರ್ಭದಲ್ಲಿ ಹೆಚ್ಚು ನಾಕಬಂದಿಯನ್ನು ಹಾಕಲಾಗುವುದು.ಇಲ್ಲಿ ಪೆÇಲೀಸ್ ಸಿಬ್ಬಂದಿ ನಿಯೋಜಿಸಿ ಆಗಮಿಸುವ ಪ್ರತಿಯೊಂದು ವಾಹನಗಳನ್ನು ಪೂರ್ಣಪ್ರಮಾಣದಲ್ಲಿ ತಪಾಸಣೆ ಮಾಡಿ ಬಿಡಲಾಗುವುದು ಎಂದು ಎಚ್ಚರಿಸಿದರು.

      ಶೀಘ್ರದಲ್ಲಿಯೇ ಹಾಸನ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಹಾಗೂ ಮಾರಾಟ ಮಾಡುವುದನ್ನು ಬುಡ ಸಮೇತ ಕಿತ್ತೊಗೆಯಲಾಗುವುದು. ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶುಂಠಿ ಹಾಗೂ ಇತರೆ ಬೆಳೆಗಳ ಮಧ್ಯೆ ಗಾಂಜಾವನ್ನು ಬೆಳೆಯಲಾಗುತ್ತಿz. ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ಮೂಲದವರು ಇದಕ್ಕೆ ಮೂಲ ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೆÇಲೀಸರು ಪಣ ತೊಟ್ಟಿದ್ದಾರೆ ಎಂದು ಭರವಸೆ ನುಡಿದರು. 2020 ಸೆಪ್ಟಂಬರ್ ತಿಂಗಳ 14 ರ ಒಳಗೆ ಜಿಲ್ಲೆಯಲ್ಲಿ 19 ಗಾಂಜಾ ಮಾರಾಟ ಹಾಗೂ ಬೆಳೆದಿರುವ ಪ್ರಕರಣಗಳಲ್ಲಿ 30 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕಳೆದ 20 ದಿನದಲ್ಲಿ 11 ಪ್ರಕರಣಗಳನ್ನು ದಾಖಲಿಸಿ 18 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಗಾಂಜಾ ಬೆಳೆಯುವುದು ಏನೇದರೂ ಕಂಡು ಬಂದರೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ಹೇಳಿದರು.

Post a Comment

Previous Post Next Post