ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರೋಚಕ ಗೆಲುವು

ನಿವೃತ್ತಿ ವಾಪಸ್ ಪಡೆದ ನಂತರ ಮೊದಲ ಬಾರಿ ಕಣಕ್ಕಿಳಿದ ಅಂಬಟಿ ರಾಯುಡು ತಮ್ಮ ಮಾಜಿ ತಂಡದ ವಿರುದ್ಧವೇ ಆರ್ಭಟಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಡುವ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ಮಿಂಚಿನ ಆರಂಭ ನೀಡಿದರು.


ಅಬುಧಾಬಿಯಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 162 ಸಂಪಾದಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.



ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಚೆನ್ನೈ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ಅಂಬಟಿ ರಾಯುಡು ವೈಯಕ್ತಿಕ ಅರ್ಧಶತಕ ಹಾಗೂ ಶತಕದ ಜೊತೆಯಾಟದ ಮೂಲಕ ಉತ್ತಮ ಆಸರೆಯಾದರು. ರಾಯುಡು 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 71 ರನ್ ಸಿಡಿಸಿ ಪಂದ್ಯ ಚೆನ್ನೈ ಪರ ವಾಲುವಂತೆ ಮಾಡಿದರು.



ಫಾಫ್ ಡು ಪ್ಲೆಸಿಸ್ ಫಾಫ್ ಡು ಪ್ಲೆಸಿಸ್ 44 ಎಸೆತಗಳಲ್ಲಿ 6 ಬೌಂಡರಿ ಸೇರಿದ 58 ರನ್ ಬಾರಿಸಿ ಔಟಾಗದೇ ಉಳಿದರು,


ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಅನುಭವಿಸಿ ಬೃಹತ್ ಮೊತ್ತ ಪೇರಿಸುವ ಅವಕಾಶದಿಂದ ವಂಚಿತರಾದರು.

Post a Comment

Previous Post Next Post