ಸಾವು-ಬದುಕಿನ ನಡುವೆ ಮರಿಯಾನೆ ತಾಯಿ ಆನೆಯ ಆಕ್ರಂದನಕ್ಕೆ ಕೊನೆಯಿಲ್ಲ

ಹಾಸನ: ನಾಲ್ಕು ದಿನಗಳಹಿಂದೆ ಜನಿಸಿದ ಮರಿಯಾನೆಯೊಂದು ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಹುಟ್ಟಿದಾಗಿ ನಿಂದ ಮರಿ ಮೇಲೆಳಲಾಗದೇ ಸ್ಥಿತಿ ಕಂಡು ತಾಯಿ ಆನೆ ಕೂಡ‌ ಆತಂಕಗೊಂಡು ಪ್ರತಿನಿತ್ಯ ರೋದಿಸುತ್ತಿದೆ. ಮರಿಯ ಸಂಕಷ್ಟ, ತಾಯಿಯ ಆಕ್ರಂದನ ಸ್ಥಳೀಯರ ಕಣ್ಣು ಒದ್ದೆ ಮಾಡಿದೆ. ಸಕಲೇಶಪುರ ತಾಲೂಕಿನ, ಮಳಲಿ ಗ್ರಾಮದ ಸಮೀಪದಲ್ಲಿ ಅನಿಲ್ ಎಂಬುವರ ಕಾಫಿ ತೋಟದಲ್ಲಿ ನಾಲ್ಕು ದಿನದ ಹಿಂದೆ ಆನೆಯೊಂದು ಮರಿಯಾಕಿದೆ.ಆರಂಭದಲ್ಲಿ ತನ್ನ ಕಂದ ನನ್ನು ಕರೆದೊಯ್ಯಲು ಪ್ರಯತ್ನಿಸಿದ ತಾಯಿ ಆನೆ ವಿಫಲವಾಗಿದೆ. ಇದಾದ ಬಳಿಕ ತನ್ನ ಮರಿಗೆ ಹಾಲುಣಿಸಲು ಶತ ಪ್ರಯತ್ನ ನಡೆಸಿದರೂ ಅದು ಕೂಡ ವಿಫಲವಾಗಿದ್ದು, ಆನೆ ರೋಧಿಸುತ್ತಾ ಕಾಫಿ ತೋಟದಲ್ಲಿ ಅಡ್ಡಾಡುತ್ತಿದೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು, ತಾಯಿ‌ ಆನೆ ಆಹಾರ ಸೇವನೆಗೆ ಹೋದ ತಕ್ಷಣ‌ ಮರಿಯಾನೆಗೆ ಚಿಕಿತ್ಸೆ ನೀಡಿ, ಕೃತಕವಾಗಿ‌ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೂ ಮರಿಯಾನೆ ಇನ್ನು ಕೂಡ ಗುಣಮುಖವಾಗಿಲ್ಲ.

Post a Comment

Previous Post Next Post