ಹಾಸನ: ಕಾರ್ಮಿಕ ಇಲಾಖೆಯಿಂದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಾರೋ ಸುಳ್ಳು ಮಾಹಿತಿ ನೀಡಿದ್ದರಿಂದ ಸಾವಿರಾರು ಜನ ಕಾರ್ಮಿಕರು ಗುರುವಾರದಂದು ತಮ್ಮ ಕೆಲಸ ಬಿಟ್ಟು ಬೆಳಗಿನಿಂದಲೇ ಜಮಾಯಿಸಿದ್ದು, ಆದರೇ ಮದ್ಯಾಹ್ನವಾದರೂ ಯಾವ ಕಿಟ್ ಕೊಡದ ಕಾರಣ ಪ್ರತಿಭಟಿಸಿದರು. ಆದರೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಸ್ಥಳಕ್ಕೆ ಆಗಮಿಸಿ ಹುರಿದುಂಬಿಸಿದರು.
ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ವಿತರಣೆ ಹಮ್ಮಿಕೊಂಡಿದೆ ಎಂದು ವಿಚಾರ ತಿಳಿದ ಕಟ್ಟಡ ಕಾರ್ಮಿಕರು ಕಿಟ್ ಪಡೆಯಲು ನಗರದ ಅರಳಿಕಟ್ಟೆ ವೃತ್ತದಲ್ಲಿ ಸಾವಿರಾರು ಜನರನ್ನು ಜಮಾಯಿಸಿದರು. ಸ್ಥಳಕ್ಕೆ ಬಂದ ಸಾವಿರಾರು ಕಟ್ಟಡ ಕಾರ್ಮಿಕರು ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಕಚೇರಿ ಬಳಿ ಸೇರಿದರು. ಕಾರ್ಮಿಕ ಇಲಾಖೆ ಕಚೇರಿ ಎದುರು ನೂಕು ನುಗ್ಗಲು ಉಂಟಾಯಿತ್ತು. ನಂತರ ಸುಮಾರು ೩೦೦೦ ಸಾವಿರ ಜನರು ಏಕಕಾಲದಲ್ಲಿ ಒಟ್ಟಿಗೆ ಜಮಾಯಿಸಿ ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ನೇತೃತ್ವದಲ್ಲಿ ಪುಡ್ ಕಿಟ್ ಮಾರಿಕೊಂಡ ಶಾಸಕರಿಗೆ ಮತ್ತು ಕಾರ್ಮಿಕ ಇಲಾಖೆ ವಿರುದ್ದ ದಿಕ್ಕಾರ ಎಂದು ಘೋಷಣೆ ಕೂಗಿದ್ದರು. ಮುಖಂಡ ಮಹೇಶ್ ಹಾಗು ಬನವಾಸಿ ರಂಗಸ್ವಾಮಿ ಹಾಗು ಜೆಡಿಎಸ್ ಮುಖಂಡ ಅಗಿಲೆ ಯೋಗಿಶ್ ರವರು. ಉಪವಿಭಾಗಧಿಕಾರಿ ಜಗದೀಶ್ ಮತ್ತು ಕಾರ್ಮಿಕ ಇಲಾಖೆ ಆಯುಕ್ತರೊಡನೆ ಮಾತನಾಡಿ ಇನ್ನೊಂದು ವಾರದಲ್ಲಿ ಆಹಾರದ ಕಿಟ್ ಗಳನ್ನು ಕೊಡುವುದಾಗಿ ಹೇಳಿದ್ದು, ಈಬಗ್ಗೆ ನಾವು ಮಾಹಿತಿ ಕೊಟ್ಟು ವಿಶಾಲವಾದ ಸ್ಥಳದಲ್ಲಿ ವಿತರಣೆ ಮಾಡಲಾಗುವುದು ಎಂದು ಭರವಸೆ ಎಸಿ ಭರವಸೆ ನೀಡಿದರು.
ನಂತರದಲ್ಲಿ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಕಾರ್ಮಿಕರನ್ನು ಸಮಧಾನ ಮಾಡಲು ಮತ್ತು ಕಾಂಗ್ರೆಸ್ ಪಕ್ಷದಿಂದಲೂ ಪುಡ್ ಕಿಟ್ ಕೊಡುವುದಾಗಿ ಮೈಕಿನಲ್ಲಿ ಹೇಳಲು ಹೋದಾಗ ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಮೈಕನ್ನು ಕಸಿದುಕೊಳ್ಳಲು ಮುಂದಾದರು. ಕೆಲ ಸಮಯ ಇಬ್ಬರ ನಡುವೆ ಜಟಾಪಟಿ ನಡೆಯಿತು. ಕೊನೆಯಲ್ಲಿ ತಣ್ಣಗಾಗಿ ಬನವಾಸೆ ರಂಗಸ್ವಾಮಿ ಮಾತನಾಡಿ ಪಕ್ಷದಿಂದಲೂ ಪುಡ್ ಕಿಟ್ ಕೊಡುವ ಬಗ್ಗೆ ವಿಶ್ವಾಸವ್ಯಕ್ತಪಡಿಸಿದರು. ಜಮಾಯಿಸಿದ ಜನರು ಅಲ್ಲಿಂದ ವಾಪಸ್ ತೆರಳಿದರು. ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿದರಿAದ ಹೆಚ್ಚಿನ ಪೊಲೀಸರು ಆಗಮಿಸಿದ್ದು, ಡಿವೈಎಸ್ಫಿ ಪುಟ್ಟಸ್ವಾಮಿಗೌಡರ ನೇತೃತ್ವದಲ್ಲಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಹಾಸನ ಜಿಲ್ಲೆಯಲ್ಲಿ ಸುಮಾರು ೫೯ ಸಾವಿರ ಜನ ನೊಂದಾಯಿತ ಕಟ್ಟಡ ಕಾರ್ಮಿಕರು ಇದ್ದು. ಹಾಸನ ತಾಲ್ಲೂಕಿನಲ್ಲಿ ೨೩ ಸಾವಿರ ಜನ ಕಟ್ಟಡ ಕಾರ್ಮಿಕರು ನೊಂದಣಿ ಮಾಡಿಕೊಂಡಿದ್ದು, ಹಾಸನ ತಾಲ್ಲೂಕಿಗೆ ೧೦ ಸಾವಿರ ಕಾರ್ಮಿಕರಿಗೆ ಆಹಾರದ ಕಿಟ್ ಬಂದಿದ್ದು, ಅದನ್ನು ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಬಿಜೆಪಿ ಮುಖಂಡರ ಗೋಡಾನ್ ನಲ್ಲಿ ದಾಸ್ತಾನು ಮಾಡಿ .ಬಿಜೆಪಿ ಕಾರ್ಯಕರ್ತರು ನಗರಸಭೆ ಸದಸ್ಯರು ತಮ್ಮ ಬೆಂಬಲಿಗರಿಗೆ ಹಂಚಿರುವುದಾಗಿ ತಿಳಿದು ಬಂದಿದೆ. ಎಲ್ಲಾ ಕಿಟ್ ಗಳನ್ನು ಬಡವರಿಗೆ ಹಂಚಿರುವುದಾಗಿ ಹೇಳಲಾಗಿದ್ದು,
ನಂತರ ಕಾರ್ಮಿಕ ಇಲಾಖೆ ಅಧಿಕಾರಿಗಳು ೧೫ ಕಟ್ಟಡ ಕಾರ್ಮಿಕ ಸಂಘಗಳ ಮುಖಂಡರನ್ನು ಕರೆಯಿಸಿ ಎಲ್ಲಾ ಸಂಘಗಳಿಗೆ ತಲಾ ೫೦೦ ಕಿಟ್ ನೀಡುವುದಾಗಿ ಹೇಳಿ ಮನವೊಲಿಸಲು ಮುಂದಾದರು. ಕಾರ್ಮಿಕರಿಗೆ ದೂರವಾಣಿ ಮುಖಾಂತರ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ಹೆಚ್ಚು ಸೇರಿಸುವುದಕ್ಕೆ ಕಾರಣರಾಗಿದ್ದಾರೆ, ಕೆಲಸಕ್ಕೆ ಹೋಗದೆ ಇರುವುದರಿಂದ ನಮ್ಮ ಒಂದು ದಿನದ ಕೂಲಿಯೂ ಇತ್ತ ಕಡೆ ಇಲ್ಲದಂತಾಗಿದೆ ಎಂದು ಕಾರ್ಮಿಕರು ದೂರಿ ತಮ್ಮ ಅಳಲು ತೋಡಿಕೊಂಡರು. ಒಂದು ಕಡೆ ಕೊರೋನಾ ಸೋಂಕು ಆವರಿಸಿ ಪ್ರತಿನಿತ್ಯ ಸಾವು-ನೋವುಗಳು ಸಂಭವಿಸುತ್ತಿದ್ದು, ಸರಕಾರವು ಮಾಸ್ಕ್, ಸಾಮಾಜಿಕ ಅಂತರಗಳ ನಿಯಮ ಜಾರಿ ತರಲಾಗಿದ್ದರೂ ಕಟ್ಟಡ ಕಾರ್ಮಿಕರ ಇಲಾಖೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಯಾವ ಕಾನೂನು ಪಾಲಿಸದೇ ಒಟ್ಟಿಗೆ ನೂಕುನುಗ್ಗಲುಗಳಲ್ಲಿ ನಿಂತಿದ್ದರು.