ಬ್ಯಾಕ್ ಲಾಗ್ ಪರೀಕ್ಷೆ: ಆನ್ ಲೈನ್ ನಲ್ಲಿ ಪರೀಕ್ಷಾ ಶುಲ್ಕ ಪಾವತಿ

ಹಾಸನ,ಅ.17- ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ (ಸ್ವಾಯತ್ತ) 6ನೇ ಸೆಮಿಸ್ಟರ್ ನಲ್ಲಿ ಅಧ್ಯಯನ ಮಾಡಿ ಸೆಪ್ಟೆಂಬರ್/ಅಕ್ಟೋಬರ್ 2020ರಲ್ಲಿ ನಡೆದ ಪರೀಕ್ಷೆಯನ್ನು ತೆಗೆದುಕೊಳ್ಳದ ಹಾಗೂ ಪರೀಕ್ಷೆಯನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಯು.ಜಿ.ಸಿ ಸರ್ಕಾರ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನಿರ್ದೇಶದನ್ವಯ 6ನೇ ಸೆಮಿಸ್ಟರ್ ನ ಪರೀಕ್ಷೆಗಳು 2, 4ನೇ ಸೆಮಿಸ್ಟರ್ ನ ಬ್ಯಾಕ್ ಲಾಗ್ ಪರೀಕ್ಷೆಗಳನ್ನು  ಪದವಿ ತರಗತಿಗಳಿಗೆ ಹಾಗೂ ಸ್ನಾತಕೋತ್ತರ ಪದವಿಗಳ 2ನೇ ಸೆಮಿಸ್ಟರ್ ಬ್ಯಾಕ್ ಲಾಗ್ ಹಾಗೂ 4ನೇ ಸೆಮಿಸ್ಟರ್ ಗೆ ಪರೀಕ್ಷೆಗಳನ್ನು  ನವೆಂಬರ್/ಡಿಸೆಂಬರ್ - 2020ರಲ್ಲಿ ನಡೆಸಲಾಗುವುದು. ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಪರೀಕ್ಷಾ ಶುಲ್ಕ ಪಾವತಿಸಿ ಪರೀಕ್ಷೆ ತೆಗೆದುಕೊಳ್ಳಬಹುದೆಂದು ಈ ಮೂಲಕ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಹೆಚ್ಚಿನ ಮಾಹಿತಿಗಾಗಿ : ಮೊ. ಸಂ. 9448741219 ಹಾಗೂ 9611278342 ಅನ್ನು ಸಂಪರ್ಕಿಸಬಹುದು.

Post a Comment

Previous Post Next Post