ತಿ.ನರಸೀಪುರ. ಅ.16:- ಜನಪರ ಕಾಳಿಜಿವುಳ್ಳ ಹೃದಯವಂತರು ಈ ಭೂಮಿ ಮೇಲೆ ಇರುವುದರಿಂದಲೇ ನಮ್ಮ ದೇಶ ಸದೃಡವಾಗಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಅಭಿಮಾನದ ಮಾತುಗಳನ್ನಾಡಿದರು.
ಪಟ್ಟಣದ ಗುರು ಭವನದಲ್ಲಿ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಸಮದೃಷ್ಟಿ ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ದೃಷ್ಟಿ ತಪಾಸಣೆಗೆ ಒಳಪಟ್ಟಿದ್ದ ಸರ್ಕಾರಿ ಶಾಲ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿದರು.
ಸಮದೃಷ್ಟಿ ಚಾರಿಟಬಲ್ ಟ್ರಸ್ಟ್ ನ ಮುಖ್ಯಸ್ಥರು ಹಾಗೂ ಟ್ರಸ್ಟ್ ನ ಬಳಗದವರು ಮನವತಾವಾದಿ ವ್ಯಕ್ತಿತ್ವವುಳ್ಳವರು ಆಗಿರುವುದರಿಂದಲೇ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲೂ ತಿ.ನರಸೀಪುರ ತಾಲ್ಲೂಕಿಗೆ ಆಧ್ಯಾತೆ ನೀಡಿ ಮಕ್ಕಳ ಕಣ್ಣುಗಳನ್ನು ಪರೀಕ್ಷೆ ಮಾಡಿ ದೃಷ್ಟಿ ದೋಷ ಉಳ್ಳವರಿಗೆ ಉಚಿತ ಕನ್ನಡಕ ನೀಡಿದ್ದಾರೆ ಈ ಒಂದು ಉತ್ತಮ ಕಾರ್ಯಯಕ್ಕೆ ಅವರಿಗೆ ತಾಲ್ಲೂಕಿನ ವತಿಯಿಂದ ಮತ್ತು ನನ್ನ ವೈಯಕ್ತಿಕ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದರು.
ತಾಲ್ಲೂಕಿನ 224 ಸರ್ಕಾರಿ ಶಾಲೆಗಳಲ್ಲಿ ಸುಮಾರು 16 ಸಾವಿರ ಮಕ್ಕಳನ್ನು ಕಣ್ಣಿನ ತಪಾಸಣೆಗೆ ಒಳಪಡಿಸಿದ್ದಾರೆ ಇದರಲ್ಲಿ ದೃಷ್ಟಿ ದೋಷ ಇರುವ 603 ಮಕ್ಕಳಿಗೆ ಸಮದೃಷ್ಟಿ ಚಾರಿಟಬಲ್ ಟ್ರಸ್ಟ್ ನವರು ಉಚಿತವಾಗಿ ಕನ್ನಡಕ ವಿತರಣೆ ಮಾಡುತ್ತಿದ್ದಾರೆ ಈ ಕನ್ನಡಕ ಕಾಟಚಾರದಿಂದ ಪ್ರಚಾರಕ್ಕೊಸ್ಕರ ವಿತರಣೆ ಮಾಡುತ್ತಿಲ್ಲ ಬಹಳ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ್ದಾಗಿದೆ ಹಾಗೂ ಈ ಕನ್ನಡಕ ನಿಮಗೆ ಹೊಂದಾಣಿಕೆ ಆಗಬೇಕಾದರೆ 2 ರಿಂದ 3 ದಿನ ಬೇಕಾಗುತ್ತದೆ ಅಲ್ಲಿವರಿಗೆ ಸಣ್ಣ ಪುಟ್ಟ ವ್ಯತ್ಯಾಸಗಳು ಆಗುತ್ತವೆ ಅದಕ್ಕೆ ಮಕ್ಕಳು ಭಯ ಪಡಬಾರದು ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದರೆ ನಿಮ್ಮ ಶಿಕ್ಷಕರ ಗಮನಕ್ಕೆ ತನ್ನಿ ಎಂದರಲ್ಲದೆ ಭವಿಷ್ಯತ್ತಿನಲ್ಲಿ ನೀವು ಉನ್ನತ ಸ್ಥಾನ ಮಾನಗಳನ್ನು ಅಲಂಕರಿಸಿದಾಗ ಈ ರೀತಿಯ ಸೇವಾ ಕಾರ್ಯ ಮಾಡಿ ಎಂದರು.
ಸಮದೃಷ್ಟಿ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಉಲ್ಲಾಸ್ ಕಮತ್ ಮತನಾಡಿ ಪೌಷ್ಟಿಕ ಆಹಾರದ ಕೊರತೆ ಮತ್ತು ಕೆಲವೊಂದು ಸಮಸ್ಯಗಳ ಬಳಲುವಿಕೆಯಿಂದ ಕಣ್ಣಿನ ದೃಷ್ಟಿ ಸಮಸ್ಯ ಮಕ್ಕಳಲ್ಲಿ ಕಾಣಿಸುತ್ತದೆ ಈ ಸಮಸ್ಯಯನ್ನ ಪೋಷಕರು ಮತ್ತು ಶಾಲಾ ಶಿಕ್ಷಕರು ಮಗುವಿನ ಆಟ ಪಾಠ ಸೇರಿದಂತ್ತೆ ಇತರೆ ಚಟುವಟಿಕೆಗಳನ್ನು ಗಮನಿಸಿ ಅವರನ್ನು ಗುರುತಿಸಿ ಕಣ್ಣಿನ ತಪಾಸಣೆಗೆ ಒಳಪಡಿಸದರೆ ದೃಷ್ಟಿ ದೋಷ ಸಮಸ್ಯ ಸರಿ ಪಡಿಸಬಹುದು ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಪೋಷಕರು ತಮ್ಮ ಮಗು ತಲೆ ನೋವು ಎಂದರೆ ಹಗುರುವಾಗಿ ತೆಗೆದುಕೊಳ್ಳಬೇಡಿ ಹಾಗೆ ಶಿಕ್ಷಕರು ಮಕ್ಕಳ ಓದು ಬರಹದಲ್ಲಿ ತಡಪಡಿಸಿದರೆ ಆ ಮಗುವನ್ನು ಸೂಕ್ಷ್ಮವಾಗಿ ಗಮನಿಸಿ ಎಂದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಮದೃಷ್ಟಿ ಚಾರಿಟಬಲ್ ಟ್ರಸ್ಟ್ ಸಿಓ ಶಿವಕುಮಾರ್ ಜನಾರ್ಧನ್, ಸಿದ್ದಾರ್ಥ ಫೈ, ಕೆ.ವಿ.ಮಹೇಶ್, ಸುನಿಲ್ ಕುಮಾರ್, ಕೃಷ್ಣನಂದ ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್ ಮೂರ್ತಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ,ಮಾದಪ್ಪ,
ದೈಹಿಕ ಪರಿವೀಕ್ಷ ಮಹಂತಪ್ಪ ನಾಗವರ, ಬಿ.ಆರ್.ಸಿ.ಮಂಜುಳ, ಶಿಕ್ಷಕ ನಾಗೇಶ್ , ಮತ್ತಿತರರು ಹಾಜರಿದ್ದರು.