ಹಾಸನ ಜಿಲ್ಲಾಡಳಿತ ಹಾಗೂ ಜನಪ್ರಿಯ ಆಸ್ಪತ್ರೆ ಸಹಯೋಗದೊಂದಿಗೆ covid 19 ಕಾಯಿಲೆ ಬಗ್ಗೆ ಜನ ಜಾಗೃತಿ ಹಾಗೂ ಪರೀಕ್ಷೆ ನಡೆಸುವ ಜನಪ್ರಿಯ ಸಂಚಾರಿ ಜನ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿಯವರಾದ ಆರ್ ಗಿರೀಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ BA ಪರಮೇಶ್ ರವರು ಜಿಲ್ಲಾ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಇದೇ ವೇಳೆ ಮಾನ್ಯ ಜಿಲ್ಲಾಧಿಕಾರಿ ಅವರು RTPCR ತಪಾಸಣೆ ಹೆಚ್ಚಿನ ಸಂಖ್ಯೆಯಲ್ಲಿ ಮಾಡುವಂತೆ ಸೂಚನೆ ನೀಡಿದರು ಹಾಗೂ ಪರೀಕ್ಷಾ ಕಿಟ್ ಗಳನ್ನು ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳಿಗೆ ತಿಳಿಸಿದರು ಜನಪ್ರಿಯ ಜನಜಾಗೃತಿ ಅಭಿಯಾನದಲ್ಲಿ ಜನರ ಮನೆಬಾಗಿಲಿಗೆ ಹೋಗಿ ಅಥವಾ ಹೆಚ್ಚಿನ ಜನಸಂಖ್ಯೆ ಇರುವ ಜಾಗಕ್ಕೆ ಹೋಗಿ ಉಚಿತವಾಗಿ ಪರೀಕ್ಷೆ ಮಾಡಿ ಕೋವಿಡ್ ಕಾಯಿಲೆ ಬಗ್ಗೆ ಮಾಹಿತಿ ಮತ್ತು ಸಲಹೆಯನ್ನು ನೀಡಲಾಗುತ್ತದೆ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕೋವಿಡ್ 19 ಕಾಯಿಲೆ ದಿನೇ ದಿನೇ ಹೆಚ್ಚಾಗುತ್ತಿದದ್ದು ಇದನ್ನು ಹತೋಟಿಯಲ್ಲಿಡಲು ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸ್ಯಾನಿಟೈಸರ್ ಬಳಸುವುದಕ್ಕಿಂತಲು ಅದಕ್ಕಿಂತಲೂ ಮುಖ್ಯವಾಗಿ ಗಂಟಲು ದ್ರವ ಪರೀಕ್ಷೆ ಮಾಡಿ covid ಕಾಯಿಲೆಯನ್ನು ಆದಷ್ಟು ಬೇಗ ಪತ್ತೆಹಚ್ಚಿ ಆ ಮೂಲಕ ಪ್ರಾಣಾಪಾಯವನ್ನು ಕಡಿಮೆಮಾಡಬಹುದು ಅಲ್ಲದೆ ನಮ್ಮ ಕುಟುಂಬದವರಿಗೆ ಅಕ್ಕಪಕ್ಕದವರಿಗೆ ಹಾಗೂ ನಮ್ಮ ಸಮಾಜಕ್ಕೆ ಹರಡದಂತೆ ನೋಡಿಕೊಳ್ಳಬಹುದು ಟೆಸ್ಟಿಂಗ್ ಗೋಸ್ಕರ ಭಯಪಡುವ ಅವಶ್ಯಕತೆ ಇಲ್ಲ ಬೇಗನೆ ಪತ್ತೆ ಹಚ್ಚಿದಲ್ಲಿ ಮನೆಯಲ್ಲೇ ಇದ್ದು ಔಷಧಿ ತೆಗೆದುಕೊಂಡು ಕಾಯಿಲೆಯನ್ನು ಗುಣ ಪಡಿಸಬಹುದು ಇತ್ತೀಚಿನ ದಿನಗಳಲ್ಲಿ ಮರಣದ ಪ್ರಮಾಣ ಮೂರು ಶತಮಾನ ಇದ್ದಿದ್ದು 15 ಶತಮಾನಕ್ಕಿಂತ ಜಾಸ್ತಿಯಾಗಿದೆ ಕೊರೋನದ ವಿರುದ್ಧ ಹೋರಾಡಲು ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ವೈದ್ಯರು ಸಂಘ ಸಂಸ್ಥೆಗಳ ಜೊತೆ ನಾವೆಲ್ಲರೂ ಕೈ ಜೋಡಿಸೋಣ ಆ ಮೂಲಕ ಕೊರೋನ ಮುಕ್ತ ಮಾಡೋಣ. ಕೊರೋನ ಟೆಸ್ಟ್ ಪ್ರಾಮುಖ್ಯತೆ ಎಂದರೆ ಎಲ್ಲರಿಗೂ ಕಾಯಿಲೆ ಸ್ವರೂಪ ಕಾಣಿಸಿಕೊಳ್ಳದೆ ಇರುವುದರಿಂದ ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ತೆಗೆದುಕೊಂಡು ಗುಣಪಡಿಸಬಹುದು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಯವರಾದ ಡಾಕ್ಟರ್ ಸತೀಶ್ ರವರು ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಅಬ್ದುಲ್ ಬಷೀರ್ ರವರು ವೈದ್ಯರಾದ ಡಾಕ್ಟರ್ ಹರೂನ್ ಜಿಲ್ಲಾ ದಂತವೈದ್ಯರ ಸಂಘದ ಅಧ್ಯಕ್ಷರಾದ ಡಾಕ್ಟರ ಕಿರಾಶ್ ರವರು ಕಾರ್ಯದರ್ಶಿ ಆದರ್ಶ ಪವಾರ್ ಸ್ವಾತಂತ್ರ ಹೋರಾಟಗಾರರಾದ ಶಿವಣ್ಣನವರು ಸಮಾಜಸೇವಕರು ಹಾಗೂ ರೆಡ್ ಕ್ರಾಸ್ ನ ಅಮ್ಜದ್ ಖಾನ್ ರವರು ಪತ್ರಕರ್ತರಾದ ಹೆತ್ತೂರು ನಾಗರಾಜ್ ರವರು ಹಾಗೂ ಅತಿಕ್ ರೆಹಮಾನ್ ರವರು ಕನ್ನಡ ರಕ್ಷಣಾ ವೇದಿಕೆಯ ಶ್ರೀ ಮನು ಕುಮಾರ್ ರವರು ಹಾಗೂ ಅವರ ತಂಡ ಭಾಗವಹಿಸಿದ್ದರು.
Tags
ಹಾಸನ