ಗ್ರಾಮಗಳಿಗೆ ಎ.ಸಿ, ತಹಶೀಲ್ದಾರ್ ಭೇಟಿ. ಸದಸ್ಯರ ಆಯ್ಕೆ ಬಗ್ಗೆ ಮಾಹಿತಿ ಪಡೆದರು

ಹಿರೀಸಾವೆ: ಗ್ರಾಮ ಪಂಚಾಯಿತಿಗೆ ಹರಾಜು ಮೂಲಕ ಸದಸ್ಯರ ಆಯ್ಕೆ ನಡೆದಿದೆ ಎನ್ನಲಾದ ಹೋಬಳಿಯ ಹಲವು ಗ್ರಾಮಗಳಿಗೆ ಹಾಸನ ಉಪವಿಭಾಗಾಧಿಕಾರಿ ಜಗದೀಶ್ ಮತ್ತು ತಹಶೀಲ್ದಾರ್ ಮಾರುತಿ ಬುಧವಾರ ಭೇಟಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಮಾಧ್ಯಮಗಳಲ್ಲಿ ದೇವಸ್ಥಾನಕ್ಕೆ, ರಥ ನಿರ್ಮಾಣಕ್ಕೆ ಹಣ ಸಂಗ್ರಹಕ್ಕೆ ಹರಾಜು ಮೂಲಕ ಸದಸ್ಯರ ಆಯ್ಕೆ ಬಗ್ಗೆ ವರದಿಗಳು ಬಂದ ಹಿನ್ನೆಲೆ ಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ರು, ಹಳ್ಳಿಗಳಲ್ಲಿ ಪರಿಶೀಲನೆ ನಡೆಸಿ, ವರದಿ ತರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗವು ಸೂಚನೆ ನೀಡಿತ್ತು.

ಹೋಬಳಿಯ ಕೊಳ್ಳೇನಹಳ್ಳಿ, ಹೊಸಹಳ್ಳಿ, ನಾಗನಹಳ್ಳಿ, ಮಂಡಲಿಕನಹಳ್ಳಿ, ದಾಸರಹಳ್ಳಿ, ಮೆಳ್ಳಹಳ್ಳಿ, ದಿಡಗ, ಕರಿಕ್ಯಾತನಹಳ್ಳಿ, ಚಿಕ್ಕೊನಹಳ್ಳಿ, ಬದ್ದಿಕೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಹರಾಜು ಬಗ್ಗೆ ದೂರು ಅಥವಾ ಮಾಹಿತಿ ಸಿಕ್ಕರೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಎಸಿ ಜಗದೀಶ್ ಎಲ್ಲ ಗ್ರಾಮಸ್ಥರಿಗೆ ಎಚ್ಚರಿಕೆ.

'ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ಉಪವಿಭಾಗಾಧಿಕಾರಿಗಳು ಮಾಹಿತಿ ನೀಡಿದ್ದಾರೆ' ಎಂದು ತಹಶೀಲ್ದಾರ್ ಮಾರುತಿ ಗುರುವಾರ ತಿಳಿಸಿದರು.

Post a Comment

Previous Post Next Post