ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸನ್ (CCIM)ನ ಇತ್ತೀಚಿನ ಆದೇಶದಲ್ಲಿ ಸ್ನಾತಕ್ಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿಗಳ ಅಧಿಸೂಚನೆಯನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(IMA) ಇಂಡಿಯನ್ ಡೆಂಟಲ್ ಅಸೋಸಿಯೇಷನ್ (IDA) ಹಾಸನ ಶಾಖೆ ವತಿಯಿಂದ ನಗರದ ಹೇಮಾವತಿ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ IDA ಜಿಲ್ಲಾಧ್ಯಕ್ಷ ಡಾ. ಕಿರಾಷ್ ಪರ್ತಿಪ್ಪಾಡಿ, ಕೇಂದ್ರ ಸರ್ಕಾರ ಆಯುರ್ವೇದ ಶಿಕ್ಷಣ ಪದ್ಧತಿ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆಯನ್ನು ತೆರೆದಿದ್ದು, ಈ ರೀತಿಯ ಮಿಶ್ರಿತ ವೈದ್ಯಕೀಯ ಶಿಕ್ಷಣ ನೀಡುವುದರಿಂದ ಅರೆಬೆಂದ ವೈದ್ಯರು ಹೊರಬರುತ್ತಾರೆಯೇ ಹೊರತು ಆಯುರ್ವೇದ ಅಸ್ಮಿತೆ ಮತ್ತು ಬೆಳವಣಿಗೆ ಕಾಣಲು ಸಾಧ್ಯವಿಲ್ಲ, ಅವೈಜ್ಞಾನಿಕವಾಗಿ ವೈದ್ಯಪದ್ಧತಿಗಳನ್ನು ಮಿಶ್ರಗೊಳಿಸುವ ಹಿಮ್ಮುಖ ಹೆಜ್ಜೆಯನ್ನು ನಾವು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ PHANA ಅಧ್ಯಕ್ಷ ಡಾ. ಅಬ್ದುಲ್ ಬಶೀರ್, ಡಾ.A.ನಾಗರಾಜ,IMA ಅಧ್ಯಕ್ಷ ಡಾ.ರಮೇಶ್, ಡಾ.ವಾಗೀಶ್ ಭಟ್ ಡಾ.ತೇಜಸ್ವಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಹದೇವ್ ಸಿ ಕೆ ,ಡಾ.ವಿವೇಕಾನಂದ , ಡಾ.ಪ್ರವೀಣ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Tags
ಹಾಸನ