ರಂಗೋಲಿ ಹಳ್ಳದ ರಘು ಕೊಲೆಯಾಗಿದ್ದೇಕೆ ಗೊತ್ತಾ? ಮರ್ಡರ್ ಮಿಸ್ಟರಿ ಪತ್ತೆ ಹಚ್ಚಿದ ಪೊಲೀಸರು

ಹಾಸನ: ಅಕ್ಕನ ಮದುವೆಗಾಗಿ ಸಾಲ ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಕೊಡುವುದಿಲ್ಲ ಎಂದು ಹೇಳಿದಕ್ಕೆ ಸಾಲ ಕೊಟ್ಟವನು ಸೇರಿ ಐದು ಜನರು ರಘು ಎಂಬುವನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಗರ ವೃತ್ತ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.
​ ​ ​ ​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಕಳೆದ ಮೂರು ದಿವಸಗಳ ಹಿಂದೆ ಹಾಸನ ನಗರದ ಸಂಸ್ಕೃತ ಭವನದ ಎದುರು ಇರುವ ಜೆ.ಪಿ. ಟೀ ಅಂಗಡಿ ಹತ್ತಿರ ರಂಗೋಲಿಹಳ್ಳದ ರಘು ಕೊಲೆಗೆ ಹಳೆ ದ್ವೇಷವೇ ಕಾರಣವೆಂದು  ನಂದೀಶ, ಭವಿತ ಹಾಗೂ ಇತರರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳು ಹೊಳೆನರಸೀಪುರದ ತೇಜಸ್ನ ಸ್ನೇಹಿತ ಕಿಶನ್ ಎಂಬುವನ ಮನೆಯಲ್ಲಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಹಾಸನದ ರಂಗೋಲಿಹಳ್ಳ, ತಿಮ್ಮೇಗೌಡರ ವಠಾರದ ನಿವಾಸಿ ನಂದಿ ಎಂಟರ್ ಪ್ರೈಸಸ್ ಫೈನಾನ್ಸ್ ನಲ್ಲಿ ಕೆಲಸ ಮಾಡುವ ಭವಿತ್ ೧೯ ವರ್ಷ ಮೊದಲ ಆರೋಪಿ, ಹಾಸನ ಶಾಂತಿನಗರ ನಿವಾಸಿ ಆರ್.ಎಂ.ಸಿ. ಯಲ್ಲಿ ತರಕಾರಿ ವ್ಯಾಪಾರ ಮಾಡುವ ತೇಜಸ್ ೧೯ ವರ್ಷ ಎರಡನೇ ಆರೋಪಿ, ಹಾಸನ ನಗರದ ಜಯನಗರ ಪೆಟ್ರೋಲ್ ಬಂಕ್ ಹತ್ತಿರ ವಾಸವಾಗಿರುವ ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಪುನಿತ್ ೨೧ ವರ್ಷ, ಹಾಸನ ಬಳಿ ಚನ್ನಪಟ್ಟಣದ ಹೌಸಿಂಗ್ ಬೋರ್ಡ್ನಲ್ಲಿ ವಾಸವಾಗಿರುವ ಐಟಿಐ ವಿದ್ಯಾರ್ಥಿ ನವೀನ್ ಕುಮಾರ್ ೨೧ ವರ್ಷ ನಾಲ್ಕನೆ ಆರೋಪಿಯಾಗಿದ್ದು, ಕೊನೆಯ ಆರೋಪಿ ಹಾಸನದ ಶಾಂತಿನಗರ ನಿವಾಸಿ ಎಪಿಎಂಸಿಯಲ್ಲಿ ತರಕಾರಿ ಹೋಲ್ ಸೇಲ್ ವ್ಯಾಪಾರ ಮಾಡುವ ವಿವೇಕ್ ೨೪ ವರ್ಷ ಎಂಬುವರೆ ರಂಗೋಲಿಹಳ್ಳದ ನಿವಾಸಿ ರಘು ಎಂಬುವರನ್ನು ಕೊಲೆ ಮಾಡಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದವರು.

​ ​ ​ ​ ​ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಮತ್ತು ಮೃತ ರಘು ಸ್ನೇಹಿತರಾಗಿದ್ದು, ರಘು ಎಂಬುವರು ತೇಜಸ್ನಿಂದ ೧,೫೦,೦೦೦ ರೂ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, ವಾಪಸ್ ೫೦ ಸಾವಿರ ಪಡೆದು, ತನ್ನ ಅಕ್ಕನ ಮದುವೆಗೆಂದು ಪೂರ್ಣ ಹಣವನ್ನು ವಾಪಸ್ ಕೊಡು ಎಂದು ಕೇಳಿದ್ದರಿಂದ ತಾನು ಕೊಡುವುದಿಲ್ಲ ನೀನು ಏನು ಬೇಕಾದರೂ ಮಾಡಿಕೋ ಎಂದು ಹೇಳಿದ್ದು, ಇದೇ ವಿಚಾರದಲ್ಲಿ ಆರೋಪಿಗಳೆಲ್ಲರೂ ರಘುನನ್ನು ಕೊಲೆ ಮಾಡುವ ಉದ್ದೇಶದಿಂದ ೨೦೨೦ ಡಿಸೆಂಬರ್ ೫ ರಂದು ಆರೋಪಿಗಳೆಲ್ಲರೂ ಸೇರಿ ಮಚ್ಚುಗಳು ಮತ್ತು ಕಾರದ ಪುಡಿಯನ್ನು ತೆಗೆದುಕೊಂದು ಬೈಕಿನಲ್ಲಿ ಹಾಸನ ನಗರದ ಸಂಸ್ಕೃತ ಭವನದ ಎದುರು ಇರುವ ಜೆ.ಪಿ ಟೀ ಅಂಗಡಿ ಹತ್ತಿರ ಬಂದು ಏಕಾ ಏಕಿ ರಘುವಿನ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಮುಚ್ಚುಗಳಿಂದ ರಘುವಿನ ತೆಲೆಗೆ ಮೈ ಕೈಗೆ ದೇಹದ ಇತರ ಭಾಗಗಳಿಗೆ ಎಲ್ಲಂದರಲ್ಲಿ ಕೊಚ್ಚಿ ಕೊಲೆ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಆರೋಪಿಗಳು ಇನ್ನು ಇತರೆ ಪ್ರಕರಣದಲ್ಲಿ ಭಾಗಿಯಾಗಿಯಾಗಿರುತ್ತಾರೆಯೇ ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.

​ ​ ​ ಆರೋಪಿಯನ್ನು ಪತ್ತೆ ಮಾಡಿದ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪುಟ್ಟಸ್ವಾಮಿಗೌಡ, ಹಾಸನ ನಗರ ವೃತ್ತದ ಪೊಲೀಸ್ ನಿರೀಕ್ಷಕರಾದ ಕೃಷ್ಣರಾಜು, ಹಾಸನ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಆಭಿಜಿತ್ ಹಾಗೂ ಸಿಬ್ಬಂದಿಗಳಾದ ಹರೀಶ್, ಪ್ರವೀಣ, ಲತೇಶ್, ರವಿಕುಮಾರ, ವೇಣುಗೋಪಾಲ, ದಿಲೀಪ್, ಜಮೀಲ್ ಅಹಮದ್ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಶ್ರೀನಿವಾಸಗೌಡ  ಪ್ರಶಂಸಿಸಿ ವಿಶೇಷ ಬಹುಮಾನ ಘೋಷಣೆ ಮಾಡಿದ್ದಾರೆ.

Post a Comment

Previous Post Next Post