ಗೋಹತ್ಯೆ ಕಾಯ್ದೆ ವಿರೋಧಿಸಿ: ಬದನೆಕಾಯಿ ಪ್ರತಿಭಟನೆ

ಸಕಲೇಶಪುರ:  ಗೋಹತ್ಯೆ ಕಾಯ್ದೆ ರದ್ದು ಗೊಳಿಸಬೇಕು ಹಾಗೂ ಗೋಮಾಂಸ ಉದ್ದಿಮೆದಾರರಿಗೆ ಆತ್ಮ  ನಿರ್ಭರ್ ಯೋಜನೆಯಡಿ ವಿಷೇಶ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬದನೆಕಾಯಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
 
ಪಟ್ಡಣದ ಮಿನಿ ವಿದಾನ ಸೌದ ಮುಂಭಾಗ ಪ್ರತಿಭಟನೆ ನಡೆಸಿದ  ಪ್ರತಿಭಟನಾಕಾರರು 
ರಾಜ್ಯದಲ್ಲಿ ಗೋಹತ್ಯೆ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸುತ್ತಿರುವ ಕ್ರಮವನ್ನು ವಿರೋಧಿಸಿ ದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ 
ಅದ್ಯಕ್ಷ ಮಲ್ನಾಡ್ ಮೆಹಬೂಬ್, ಬದನೆಕಾಯಿ ಗೆ ನೀಡುವಷ್ಟು ಪ್ರಾಮುಖ್ಯತೆ ಮಾಂಸವನ್ನು ತಿನ್ನುವ ಜನರಿಗೂ ನೀಡಬೇಕು ಎಂದರು.
ಈ ಜಗತ್ತಿಗೆ ದನ,ಹಂದಿ,ನಾಯಿ ತಿನ್ನುವ ಜನರು  ಆವಿಷ್ಕಾರಗಳು, ಪುರಸ್ಕಾರಗಳು. ಪ್ರಗತಿಗಳು ಹೆಚ್ಚು ಕೊಡುಗೆನೀಡಿದ್ದಾರೆ ಎಂದರು.

ದನ, ಹಸು, ಎಮ್ಮೆ, ಕೋಣ, ಆಹಾರಕ್ಕಾಗಿ ಉಪಯೋಗಿಸಲು ನಿಷೇಧಿಸುವ ಕಾನೂನು  ಕಾನೂನನ್ನು ದೇಶಾದ್ಯಂತ ಬಿಜೆಪಿ ಆಡಳಿತ ನಡೆಸುತ್ತಿರುವ ಎಲ್ಲಾ ರಾಜ್ಯಗಳಲ್ಲಿ  ಜಾರಿಗೆ ತರಬೇಕು, ಒಂದು ದೇಶದಲ್ಲಿ ಒಂದೇ ಕಾನೂನು ಜಾರಿಯಾಗಬೇಕು.
ಸಕಲೇಶಪುರ  ಜನರಿಗೆ ರಪ್ತು ದರ್ಜೆಯ  ದನ, ಹಸು, ಎಮ್ಮೆ, ಕೋಣ, ಆಹಾರಕ್ಕಾಗಿ ಉಪಯೋಗಿಸಲು ಅವಕಾಶನೀಡದೆ ಪರ ದೇಶದಲ್ಲಿರುವ ಜನರಿಗೆ ಅವಕಾಶ ನೀಡುವುದು ಸರಿಯಾದ ಕ್ರಮವಲ್ಲ ಅದುದ್ದರಿಂದ,
ಗೋಮಾಂಸ ವಿದೇಶಕ್ಕೆ ರಫ್ತು ಮಾಡುವುದನ್ನು ನಿಷೇಧಿಸುವ ವರಗೆ  ತಾಲ್ಲೂಕಿನ ಅಂಗಡಿಗಳಲ್ಲಿ  ರಪ್ತು ಮಾಡುತ್ತಿರುವ   ಕಂಪನಿಗಳಾದ ಸತೀಶ್ ಸಬ್ರೆವಾಲ್ ಮಾಲೀಕತ್ವದ   ಅಲ್ ಕಬೀರ್‌, 
ಸುನಿಲ್ ಕಬೀರ್ ರವರ ಮಾಲೀಕತ್ವದ  ಅರೇಬಿಯನ್ ಎಕ್ಸ್ಪೋರ್ಟ್, ಮದನ್ ಅಬ್ಬಟ್ ರವರ
ಮಾಲೀಕತ್ವದ 
ಫರ್ಜೀನ್,  ಸುನಿಲ್ ಸೂಡ್ ರವರ ಮಾಲೀಕತ್ವದ  ಅಲ್ ನೂರ್ ,  ಕಮಲ್ ಶರ್ಮ ರವರ ಮಾಲೀಕತ್ವದ
ಒಪಿ ಅರೇರ ಸೇರಿದಂತೆ  ರಪ್ತು ಮಾಡುವ ದರ್ಜೆಯ ಬ್ರಾಂಡೆಡ್  ಗೋಮಾಂಸ  ಅಧಿಕೃತವಾಗಿ ಮಾರಾಟ ಮಾಡಲು ಪರವಾನಿಗೆ  ನೀಡಬೇಕು ಎಂದರು.
ವಿದೇಶಕ್ಕೆ ರಪ್ತು ಮಾಡುವ ಮೇಲ್ ವರ್ಗದ ಜನರಿಗೆ ಗೋ ಮಾಂಸದ ಉದ್ದಿಮೆ ನಡೆಸಲು ಅವಕಾಶ ನೀಡಲಾಗುತ್ತದೆ. ಸ್ವದೇಶದಲ್ಲಿ ಆರ್ಥಿಕವಾಗಿ ದುರ್ಲಭ ವಾಗಿರುವ ಜನರು ಗೋಮಾಂಸ ದ ಉದ್ದಿಮೆ ನಡೆಸಲು ಅವಕಾಶವಿಲ್ಲ ಇದು ಆರ್ಥಿಕ ವಾಗಿ  ಕೆಲವು ಜನಾಂಗವನ್ನು ಧಮನಿಸುವ ಕಾಯಿದೆ ಎಂದರು.

ಆತ್ಮ ನಿರ್ಭರ್ ಯೋಜನೆಯಡಿ ದನದ ಮಾಂಸ  ಉದ್ದಿಮೆ ನಡೆಸುತ್ತಿದ್ದ ಉದ್ದಿಮೆದಾರರಿಗೆ ಆದ್ಯತೆ ನೀಡಿ  ಆರ್ಥಿಕ ಸಹಾಯ ಹಾಗೂ ಉದ್ಯೋಗ ಶೀಲತೆ ತರಬೇತಿ ನೀಡಬೇಕು. 
ಜಿಲ್ಲೆಯ ದನದ ಮಾಂಸ  ಉದ್ದಿಮೆದಾರರಿಗೆ ತೆಂಗು ಉತ್ಪನ್ನದ  ಮಾರುಕಟ್ಟೆಯಲ್ಲಿ ವಿಷೇಶ ಸಹಕಾರ ನೀಡಬೇಕು. ತೆಂಗು ಉತ್ಪಾದನೆ ಹಾಗೂ ಕೈಗಾರಿಕೆ ನಡೆಸಲು ಸರ್ಕಾರ 2 ಎಕ್ಕರೆ ಭೂಮಿಯನ್ನು ನೀಡಬೇಕು ಎಂದರು.
ಪ್ರತಿಭಟನೆ ಯಲ್ಲಿ 
 ಕಾರ್ಯದರ್ಶಿ ಹರೀಶ್, ದ ಸಂ ಸ (ಬೀಮ ವಾದ) ರಾಜ್ಯ ಸಂಚಾಲಕ ಹೆತ್ತೂರ್ ನಾಗರಾಜ್, ಗೋಹತ್ಯ ಕಾಯಿದೆ ವಿರೋಧಿ ಆಂದೋಳನದ ರಾಜ್ಯ ಸಂಚಾಲಕ ಶಫಿಯಲ್ಲ ಚಿತ್ರದುರ್ಗ, ಕೋಮು ಸೌಹಾರ್ದ ವೇದಿಕೆ ಮುಖಂಡ ಚಿಕ್ಕಮಗಳೂರು ಮಹಮ್ಮದ್ ಗೌಸ್, ಪುಸ್ತಕ ಮನೆ ಪ್ರಕಾಶಕ  ಪದ್ಭನಾಭ,  ಕಾಂಗ್ರೆಸ್ ಮುಖಂಡ ಬೈಕೇರೆ ಆಟೋ ದೇವರಾಜ್, ಪುರಸಭೆ ಸದಸ್ಯ ಅಣ್ಣಪ್ಪ, 
ದ ಸಂ ಸ (ಬೀಮ ವಾದ) ಜಿಲ್ಲಾ ಸಂಚಾಲಕ ಬಸವರಾಜ್, ಹೆನ್ರಿ,  ದಲಿತ ಸಂಘಟನೆಗಳ ಒಕ್ಕೂಟ ದ ಸಂಚಾಲಕ ಜೈ ಭೀಮ್ ಮಂಜು, ಯಸಳೂರು ಮಂಜು, ಮೀಸೆ ಮಂಜಯ್ಯ, ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಒಕ್ಕೂಟದ ಅದ್ಯಕ್ಷ ಜಾವೀದ್, ವಕೀಲ ವೇಣು ರಾವಣ್, 
 ವೀರ ಕನ್ನಡಿಗ ಟಿಪ್ಪು ಸೇನೆ ಕಾರ್ಯಕರ್ತರಾದ ನಯಾಜ್ ಅಹಮ್ಮದ್, ತಯ್ಯಬ್ ಪಾಶ, ಜುಬೇರ್, ನವೀದ್, ಜಾಮಿಯ ಮಸಿದಿ ಸದಸ್ಯ ಹಾಜಿ ಕುರೈಶಿ, ,ಆದಿವಾಸಿ ಹಸಲರ ಸಂಘದ ರಾಜ್ಯ ಕಾರ್ಯದರ್ಶಿ ನವೀನ್ ಸದಾ.ಮಾಂಸದ ಉದ್ದಿಮೆದಾರರಾದ  ಸಲ್ಮಾನ್,   ಅತೀಕ್, ನಯಾಜ್,  ಮುಂತಾದವರು ಇದ್ದರು

Post a Comment

Previous Post Next Post