ಎಪ್ರಿಲ್ 1 ರಿಂದ‌ ಡ್ರೈವರ್​ ಸೀಟ್​ ಜೊತೆಗೆ, ಪ್ಯಾಸೆಂಜರ್ ಸೀಟ್​ಗೂ ಏರ್​ಬ್ಯಾಗ್ ಕಡ್ಡಾಯ

ನವದೆಹಲಿ: ಇನ್ಮುಂದೆ ಹೊಸ ಕಾರ್​​ಗಳಲ್ಲಿ ಮುಂಭಾಗದ ಎರಡೂ ಸೀಟ್​​ಗಳಲ್ಲಿ ಏರ್​​ಬ್ಯಾಗ್ಸ್​ ಇರೋದು ಕಡ್ಡಾಯ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇಂಥದ್ದೊಂದು ಹೊಸ ರೂಲ್ಸ್​ ತಂದಿದ್ದು, ಈ ಸಂಬಂಧ ಗೆಜೆಟ್​ ನೋಟಿಫಿಕೇಷನ್ ಹೊರಡಿಸಿದೆ. 2021, ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಹೊಸ ಕಾರುಗಳು ಫ್ರಂಟ್​​ಸೀಟ್​​ ಪ್ರಯಾಣಿಕರಿಗೆ ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ನಂತೆ ಎರಡು ಏರ್‌ಬ್ಯಾಗ್‌ಗಳನ್ನು ಹೊಂದಿರಬೇಕು. ಇನ್ನು 2021, ಏಪ್ರಿಲ್ 1ರ ನಂತರ ತಯಾರಾಗುವ ಕಾರ್​ಗಳು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಕಾರ್​ಗಳನ್ನ 2021ರ ಆಗಸ್ಟ್​ 31ರಿಂದ ಎರಡು ಏರ್​​ಬ್ಯಾಗ್​​ಗಳೊಂದಿಗೆ ಮಾರಾಟ ಮಾಡಬೇಕು. ಡ್ರೈವರ್​ ಸೀಟ್​ ಜೊತೆಗೆ, ಮುಂಭಾಗದ ಮತ್ತೊಂದು ಪ್ಯಾಸೆಂಜರ್ ಸೀಟ್​ಗೂ ಏರ್​ಬ್ಯಾಗ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ.

ಈ ಪ್ರಮುಖ ಸುರಕ್ಷತಾ ಕ್ರಮವನ್ನ ಕಡ್ಡಾಯವೆಂದು ಪರಿಗಣಿಸಲಾಗಿದೆ. ರಸ್ತೆ ಸುರಕ್ಷತೆ ಕುರಿತು ಸುಪ್ರೀಂ ಕೋರ್ಟ್ ಕಮಿಟಿ ನೀಡಿದ ಸಲಹೆ ಆಧಾರದ ಮೇಲೆ ಈ ನಿಯಮ ರೂಪಿಸಲಾಗಿದೆ ಎಂದು ವರದಿಯಾಗಿದೆ.

Post a Comment

Previous Post Next Post