ರಮೇಶ ಜಾರಕಿಹೋಳಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಸಕಲೇಶಪುರ: ರಾಜ್ಯ ಸರಕಾರ ಕಾಮುಕ  ರಮೇಶ ಚಾರಕಿಹೊಳಿ ರಕ್ಷಿಸುವ ನೀಜತನಕ್ಕೆ ಇಳಿದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಸಮದ್ ಹೇಳಿದರು.



ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಸತೀಶ್ ಜಾರಕಿಹೊಳಿ ವಿರುದ್ದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಕಣ್ಣೋರಿಸುವ ತಂತ್ರಕ್ಕಾಗಿ ಡಮ್ಮಿ ಕೇಸು ದಾಖಲಿಸಲಾಗಿದೆ ಎಂದರು.

ರಮೇಶ ಜಾರಕಿಹೊಳಿ ವಿರುದ್ದ 376 ಕಲಂ ಅಡಿಯಲ್ಲಿ ಕೇಸು ದಾಖಲಿಸ ಬೇಕಾಗಿತ್ತು, ಅರೋಪಿಯನ್ನು ಸಂರಕ್ಷಿಸುವ ಉದ್ದೇಶದಿಂದ 376 (3) ದಾಖಲಿಸಿದೆ ಎಂದು ವಿವರಿಸಿದರು.

ರಾಜ್ಯ ಸರಕಾರ ಕೆಟ್ಟು ನಾರುತ್ತಿದೆ. ಸಮಾಜದ ಸಂಸ್ಕಾರಗಳನ್ನು  ನಾಶಮಾಡಿ, ಅನೈತಿಕತೆಯನ್ನು ಸಮಾಜದ ಮೇಲೆ ಹೇರಿ ಕೆಟ್ಟ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿದೆ ಎಂದರು.

ರಾಜ್ಯದ ಜನ ವಿರೋದಿ ಆಡಳಿತದಿಂದ ಜನ ರೋಸಿಹೋಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜನ ಪರವಾದ ವಿಚಾರಗಳನ್ನು ಮುಂದಿಟ್ಟುಕೊಂಡು ಬೀದಿಗಿಳಿಯಬೇಕಾಗಿತ್ತು, ವಿಶಾದನೀಯ ವೆಂದರೆ ಇಂತಹ ನೀಚ ಕೃತ್ಯಗಳನ್ನು ಖಂಡಿಸಿ ಬೀದಿಗಿಳಿಯಬೇಕಾಗಿದೆ ಎಂದರು.

ತಾಲ್ಲೂಕು ಅಧ್ಯಕ್ಷ ಹಾನುಬಾಳ್ ಬಾಸ್ಕರ್ ಮಾತನಾಡಿ, ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪ್ರಮುಖ ಆರೋಪಿ ಯಾಗಿದ್ದಾರೆ. ಇವರನ್ನು ಬಂದಿಸಿ ವಿಚಾರಣೆ ಮಾಡಬೇಕು. ಕಾಂಗ್ರೆಸ್ ರಾಜ್ಯಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಇಲ್ಲ ಸಲ್ಲದ ಅರೋಪಮಾಡುತ್ತಿರುವುದು ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯದರ್ಶಿ ಸಲೀಂ ಕೊಲ್ಲಹಳ್ಳಿ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ  ವಿಭಾದ ಸಂಚಾಲಕ  ಫಾರೂಕ್,  ತಾ ಪಂ ಸದಸ್ಯ ಉದಯ್, ಟಿಎಪಿಎಂಸಿ ಲೋಹಿತ್, ಯುವ ಕಾಂಗ್ರೆಸ್ ಅಧ್ಯಕ್ಷ ನದೀಮ್, ಕಾಂಗ್ರಸ್ ಮುಖಂಡಈಶ್ವರ್ ಆಳ್ವ, ಬೈಕೆರೆ ದೇವರಾಜ್ , ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ, ತಾ ಪಂ ಸದಸ್ಯ ಕೃಷ್ಣ ಗೌಡ, ವಡ್ಡರಳ್ಳಿ ನಾಗರಾಜ್ , ಗೋದ್ದು ಲೋಕೇಶ್, ಸುಲೈಮಾನ್, ದೇವರಾಜ್ , ಭುವನಾಕ್ಷ, ಮೋಹನ್, ಕಾಂಗ್ರೇಸ್  ಉಪಾಧ್ಯಕ್ಷ ಮನ್ಸೂರ್ ಮುಂತಾಸವರು ಇದ್ದರು

Post a Comment

Previous Post Next Post