ಮಹಿಳೆ ದೌರ್ಜನ್ಯ ಮುಚ್ಚಿಡುವುದು ತಪ್ಪು: ಡಾ. ಹಾಲಿಯಾ

ಸಕಲೇಶಪುರ:  ಮಹಿಳೆಯರು ದೌರ್ಜನ್ಯಕ್ಕೆ  ಒಳಗಾದ ಸಂದರ್ಭದಲ್ಲಿ ತನ್ನ ಮೇಲಾದ ಅನ್ಯಾಯಗಳನ್ನು ಮುಚ್ಚಿಡುವಂತಹ  ಪ್ರಯತ್ನ ಮಾಡುತ್ತಿರುವುದು ಮತ್ತಷ್ಟು  ಅನ್ಯಾಯಕ್ಕೆ  ಕಾರಣವಾಗುತ್ತಿದೆ  ಎಂದು  ಡಾ. ಹಾಲಿಯಾ ಹೇಳಿದರು. 

ಪಟ್ಟಣದ ಭೀಮ ಮಂದಿರದಲ್ಲಿ ಮಹಿಳಾ ಜಾಗೃತಿ  ಮಾರ್ಗದರ್ಶಿ ಅಸೋಸಿಯೇಷನ್  ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ  ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ದೌರ್ಜನ್ಯಗಳನ್ನು ಬಚ್ಚಿಡುವುದು, ಸಹಿಸುವುದು ಸರಿಯಾದ ಕ್ರಮವಲ್ಲ ಎಂದು ಪ್ರತಿಪಾದಿಸಿದರು. 

ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದರ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

ತಾಲೂಕು ಸಿಡಿಪಿಒ ಕಸ್ತೂರಿ ಮಾತನಾಡಿ, ಸರಕಾರದ ಅನೇಕ ಸೌಲಭ್ಯಗಳು ಮಹಿಳೆಯರ ಪರವಾಗಿದೆ ಈ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು  ಮಹಿಳೆಯರಿಗಾಗಿ ಪೌಷ್ಟಿಕ ಅಹಾರ  ಸರಕಾರ ವಿತರಿಸುತ್ತದೆ ಇದನ್ನು ಸಹ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಷನ್ ಅಧ್ಯಕ್ಷೆ ಕಲ್ಪನಾ ಕೀರ್ತಿ ಮಾತನಾಡಿ, ನಮ್ಮ ಸಂಸ್ಥೆ ಪ್ರಾಮಾಣಿಕವಾಗಿ ಮಹಿಳೆಯರ ಪರವಾಗಿ ದುಡಿಯುತ್ತಿದೆ. ಮಹಿಳೆಯರಿಗೆ ಅನ್ಯಾಯವಾದಗ   ಯಾವುದೇ ಮುಲಾಜಿಗೆ ಒಳಗಾಗದೆ ಕಾರ್ಯನಿರ್ವಹಿಸುತ್ತದೆ ಎಂದರು. 

ಬೀದಿಯಲ್ಲಿ ಪೋಷಕರಿಲ್ಲದ, ಅನಾಥವಾಗಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ವಂತಹ ಮಹತ್ವದ ಕೆಲಸವನ್ನು ನಾವು ಮಾಡುತ್ತಾ ಬಂದಿದ್ದೇವೆ ಎಂದರು ಸಂಸ್ಥೆ ಮಹಿಳೆಯರ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ  ಕವಿಯತ್ರಿ ನಂದಿನಿ ಅವರನ್ನು  ಹಾಗೂ ಪತ್ರಕರ್ತ ಮಲ್ನಾಡ್ ಮೆಹಬೂಬ್ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಯಮಂತಿ ನಾಗಾರಾಜ್, ಸುಮಿತ್ರಾ, ಲಕ್ಷ್ಮಣ್ ಕೀರ್ತಿ ಮುಂತಾದವರು ಇದ್ದರು.


Post a Comment

Previous Post Next Post