ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಿರುಗಾಡಿ ಆತಂಕ ಮೂಡಿಸಿದ್ದ ಒಂಟಿ ಸಲಗ ಇದೀಗ ರೈಲು ಹಳಿಗಳ ಮೇಲೆ ತಿರುಗಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಸಲಗವೊಂದು ತಿರುಗಾಡುತ್ತಿದ್ದು, ವಕೀಲ್ ಎಂಬ ರಾಜಸ್ಥಾನ ಮೂಲದ ಲಾರಿಚಾಲಕನ ಸಾವಿಗೂ ಈ ಆನೆ ಕಾರಣವಾಗಿತ್ತು. ಇದೀಗ ಇದೇ ಆನೆ ರೈಲುಹಳಿಗಳ ಮೇಲೆ ತಿರುಗಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ.
ತಾಲೂಕಿನ ಕಡಗರಹಳ್ಳಿ ಸಮೀಪ 60/600 ಮೈಲುಗಲ್ಲಿನ ಹತ್ತಿರವಿರುವ ಸುರಂಗದಿಂದ ರಾಜಾರೋಷವಾಗಿ ಬರುವ ಕಾಡಾನೆ ರೈಲು ಸೇತುವೆ ಮೇಲೆ ಬಂದು ನಂತರ ಪಕ್ಕಕ್ಕೆ ಹೋಗಿದೆ. ಕಾಡಾನೆ ರೈಲು ಹಳಿಗಳ ಮೇಲೆ ಸಂಚರಿಸುವುದನ್ನು ಅಲ್ಲೇ ಇದ್ದ ಕೆಲವರು ದೂರದಿಂದ ವಿಡಿಯೊ ಮಾಡಿರುವುದು ವೈರಲ್ ಆಗಿದೆ. ಆನೆ ಸಂಚರಿಸುವ ವೇಳೆ ರೈಲು ಬಂದಲ್ಲಿ ಕಾಡಾನೆಗೆ ಅಪಾಯವಾಗುವ ಸಾಧ್ಯತೆಯಿದೆ. ಶಿರಾಡಿ ಘಾಟ್‌ನಲ್ಲಿ ತಿರುಗಾಡುತ್ತಿರುವ ಒಂಟಿಸಲಗ ಅರಣ್ಯ ಇಲಾಖೆಯವರಿಗೆ ತಲೆನೋವಾಗಿ ಪರಿಣಮಿಸಿದೆ.

Tags
ಸಕಲೇಶಪುರ