6.24 ಕೋಟಿ ಕೋವಿಡ್-19 ಲಸಿಕೆ ನೀಡಿಕೆ ಪೂರ್ಣಗೊಳಿಸಿದ ಭಾರತ

ನವದೆಹಲಿ: ದೇಶಾದ್ಯಂತ ಈ ವರೆಗೂ 6.24 ಕೋಟಿ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ.


ಮಾ.30 ರಂದು 12.94 ಲಕ್ಷ ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದ್ದು ಒಟ್ಟಾರೆ ಸಂಖ್ಯೆ 6.24 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೊದಲ ಡೋಸ್ ನ್ನು ತೆಗೆದುಕೊಂಡಿರುವ 82,00,007 ಆರೋಗ್ಯ ಕಾರ್ಯಕರ್ತರು, ಎರಡೂ ಡೋಸ್ ಗಳನ್ನು ತೆಗೆದುಕೊಂಡಿರುವ 52,07,368 ಹೆಚ್ ಸಿಡಬ್ಲ್ಯು ಗಳೂ ಈ ಪೈಕಿ ಸೇರಿದ್ದಾರೆ ಎಂದು ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.

ಭಾರತದಲ್ಲಿ ಲಸಿಕೆ ಅಭಿಯಾನ ಪ್ರಾರಂಭಿಸಿ 74 ದಿನಗಳು ಕಳೆದಿವೆ.

Post a Comment

Previous Post Next Post