ಏಪ್ರಿಲ್ ಫೂಲ್ಸ್ ಡೇ ಮೂರ್ಖರ ದಿನ ಮೋಜಿನ ಪ್ರಸಂಗ

ಗೊರೂರು ಅನಂತರಾಜು, ಹಾಸನ.

ಏಪ್ರಿಲ್ ತಿಂಗಳ ೧ನೇ ತಾರೀಖನ್ನು ಏಪ್ರಿಲ್ ಫೂಲ್ಸ್ ಡೇ ಅರ್ಥಾತ್ ಮೂರ್ಖರ ದಿನಾಚರಣೆ ಎಂದು ಕರೆಯಲಾಗಿದೆ. ವಿಶ್ವದ ಬಹುತೇಕ ಭಾಗಗಳಲ್ಲಿ ಒಬ್ಬರನ್ನೊಬ್ಬರು ಗೇಲಿ ಕುಚೋದ್ಯದ ಮೂಲಕ ತಮಾಷೆ ಮಾಡಿ ಮೂರ್ಖರನ್ನಾಗಿ ಮಾಡಿ ನಗುವುದು ನಗಿಸುವುದು ಪೂರ್ವದಿಂದಲೂ ನಡೆದುಬಂದಿದೆ. ಏಪ್ರಿಲ್ ೧ರಂದು ಮೂರ್ಖರನ್ನಾಗಿಸುವ ರೂಢಿಗೆ ಹಲವಾರು ಕಥೆಗಳಿವೆ. ಏಪ್ರಿಲ್ ೧ರಂದು ಮೂರ್ಖರನ್ನಾಗಿಸುವ ಈ ಪದ್ದತಿ ರೋಮನ್‌ರಿಂದ ನಡೆದುಬಂದಿದೆ. ಬಹಳ ವರ್ಷಗಳ ಹಿಂದೆ ರೋಮನ್ನರ ಹೊಸ ವರ್ಷ ಆರಂಭವಾಗುತ್ತಿದ್ದು ಮಾರ್ಚ್ ೧ರಿಂದ. ನಂತರ ಬಂದ ರೋಮನ್ ಚಕ್ರವರ್ತಿ ಆವರೆಗಿನ ರೂಢಿಯ ದಿನವನ್ನು ಬದಲಾಯಿಸಿ ಏಪ್ರಿಲ್ ತಿಂಗಳ ಮೊದಲ ದಿನವೆಂದು ಪರಗಣಿಸಿ ಆಚರಿಸುವಂತೆ ಆಜ್ಞೆ ಮಾಡಿದ. ಪ್ರಜೆಗಳಿಗಿದು ಸರಿ ಕಾಣಲಿಲ್ಲ. ಪರಿಣಾಮ ಅವರು ಚಕ್ರವರ್ತಿಯನ್ನು ಮೂರ್ಖನೆಂದು ಪರಿಗಣಿಸಿದರು. ಆ ಕಾರಣದಿಂದಾಗಿ ರೋಮನ್‌ನಲ್ಲಿ ಏಪ್ರಿಲ್ ತಿಂಗಳ ಮೊದಲ ದಿನವು ಮೂರ್ಖರ ದಿನವೆಂದು ಪರಗಣಿಸಲ್ಪಟ್ಟು ಆಚರಣೆಗೆ ಮೊದಲಾಯಿತು. ರೋಮನ್‌ರು ಅದನ್ನು ಮೊದಲಿಗೆ ಒಂದು ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದರು. ಆಗದು ಆ ದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆನಂತರ ಅದು ಇತರ ದೇಶಗಳಿಗೂ ಹಬ್ಬಿತು.  


ಫ್ರಾನ್ಸ್ ದೇಶದಲ್ಲಿ ನೂತನ ವರ್ಷವು ಏಪ್ರಿಲ್ ೧ರಂದು ಆರಂಭವಾಗುತ್ತಿತ್ತು. ಕ್ರಿ.ಶ.೧೫೬೪ರಲ್ಲಿ ಫ್ರಾನ್ಸ್ ದೇಶದಲ್ಲಿ ಜಗತ್ತಿನ ಮೊಟ್ಟಮೊದಲ ಕ್ಯಾಲೆಂಡರ್ ಆಸ್ತಿತ್ವಕ್ಕೆ ಬಂತು. ಕ್ಯಾಲೆಂಡರ್‌ನಲ್ಲಿ ಏಪ್ರಿಲ್೧ರ ಬದಲಾಗಿ ಜನವರಿ ೧ ಹೊಸ ವರ್ಷದ ಪ್ರಾರಂಭ ದಿನವಾಯಿತು. ಅದನ್ನು ಫ್ರಾನ್ಸಿನ ಕೆಲವು ರೂಢಿವಾದಿಗಳು ವಿರೋಧಿಸಿದರು. ಇವರನ್ನು ಸುಧಾರಣಾವಾದಿಗಳು ಮೂರ್ಖರೆಂದು ಜರಿದು ಏಪ್ರಿಲ್ ೧ರಂದು ಮೂರ್ಖರ ದಿನವನ್ನು ಆಚರಿಸತೊಡಗಿದರು. ಕ್ರಿ.ಶ.೧೫೫೦ರಿಂದ ೧೫೭೪ರವರೆಗೆ ಫ್ರಾನ್ಸ್ನ್ನು ಆಳಿದ ೧ನೇ ಚಾರ್ಲ್ಸ್ ವರ್ಷಾರಂಭವನ್ನು ಏಪ್ರಿಲ್ ೧ಕ್ಕೆ ಬದಲಾಗಿ  ಜನವರಿ ೧ರಿಂದ ಆಗಬೇಕೆಂದು ಆದೇಶ ಹೊರಡಿಸಿದ. ಏಪ್ರಿಲ್ ೧ರಂದು ನಡೆಸುತ್ತಿದ್ದ ಪರಂಪರಾಗತ ರೀತಿ ರಿವಾಜುಗಳನ್ನು ಜನವರಿ ೧ರಂದು ನಡೆಯಬೇಕೆಂದು ಆದೇಶದಲ್ಲಿ ತಿಳಿಸಿದ. ಏಪ್ರಿಲ್ ೧ರಂದು ಮುಗ್ದರನ್ನು ಹುಡುಕಿ ಏಪ್ರಿಲ್ ಮೀನು ಎಂದು ಕರೆದು ಗೇಲಿ ಮಾಡುವ ಈ ಚಟುವಟಿಕೆಯನ್ನು ಮೀನಿನ ಬೇಟೆ ಎಂದು ಕರೆಯಲಾಯಿತು. ಫ್ರಾನ್ಸ್ ದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ದೊರಕುವ ಮೀನುಗಳು ಮರಿಗಳಾಗಿದ್ದು ಸುಲಭವಾಗಿ ಬಲೆಗೆ ಸಿಕ್ಕಿ ಬೀಳುತ್ತವೆಯಂತೆ! ಹೀಗೆಯೇ ಮುಗ್ಧರು ಸಲೀಸಾಗಿ ಕುಚೋದ್ಯಗಾರರ ಬಲೆಗೆ ಸಿಕ್ಕಿ ಬೀಳುವುದರಿಂದ ಅವರನ್ನು ಹೀಗೆ ಏಪ್ರಿಲ್ ಮೀನು ಎಂದು ಕರೆದು ಗೇಲಿ ಮಾಡುತ್ತಿದ್ದರಂತೆ! 

ಈ ಏಪ್ರಿಲ್ ಫೂಲ್‌ಗಳನ್ನು ಸ್ಕಾಟ್ಲೆಂಡಿನಲ್ಲಿ ಏಪ್ರಿಲ್ ಗೋಕ್ ಎಂದು ಫ್ರಾನ್ಸಿನಲ್ಲಿ ರಾಜರ್ ದಿ ಅಪಿರಲ್ ಎಂದು ಜರ್ಮನಿಯಲ್ಲಿ ನಾರ್ ಎಂದು ಕರೆಯಲಾಗಿದೆ. ಸ್ಸಾಟ್ಲೆಂಡಿನಲ್ಲಿ ಕೋಗಿಲೆಗಳನ್ನು ದಡ್ಡ ಪಕ್ಷಿ ಎಂದು ತಿಳಿಯಲಾಗುತ್ತಿದ್ದು ಏಪ್ರಿಲ್೧ರಂದು ಹುಂಬರನ್ನು ತಮಾಷೆ ಮಾಡಲು ಎಲೈ ಕೋಗಿಲೆ ಕೋಳಿಯ ಬಾಯಲ್ಲಿ ಹಲ್ಲು ತೋರಿಸು ಚೌಕಾಕಾರದ ವೃತ್ತ ರಚಿಸು ಎಂದು ಚುಡಾಯಿಸುವರಂತೆ. ಕ್ರಿ.ಶ.೧೭೫೧ರ ಮುಂಚಿನ ಕ್ಯಾಲೆಂಡರ್ ಪ್ರಕಾರ ಯುರೋಪಿನಲ್ಲಿ ಏಪ್ರಿಲ್ ೧ ಸಂವತ್ಸರದ ಆರಂಭ ದಿನವಾಗಿ ಬಳಕೆಯಾಗುತ್ತಿತ್ತು. ನಂತರ ೧೮ನೇ ಶತಮಾನದಲ್ಲಿ ಹೊಸ ಕ್ಯಾಲೆಂಡರ್ ರೂಪುಗೊಂಡು ಏಪ್ರಿಲ್ ೧ರ ಬದಲು ಜನವರಿ ೧ ಸಂವತ್ಸರದ ಆರಂಭದ ದಿನವಾಗಿ ಮಾರ್ಪಾಡಾಯಿತು. ಈ ಬದಲಾವಣೆಗೆ ಕೆಲವು ಸನಾತನೀಯರು ಸಂಪ್ರದಾಯಸ್ಥರು ಮೂಢರು ವಿವೇಶಶೂನ್ಯರೆಂದು ಜರಿದು ಅವರುಗಳನ್ನು ಫೂಲ್ಸ್ಗಳೆಂದು ಕರೆದು ಗೇಲಿ ಮಾಡುತ್ತಾ ಏಪ್ರಿಲ್ ಫೂಲಿಂಗ್ ಪ್ರಾರಂಭಿಸಿದರೆAದು ಅದೇ ಎಪ್ರಿಲ್ ಫೂಲ್ಸ್ನ ಹುಟ್ಟುವಿಕೆಗೆ ನಾಂದಿಯಾಗಿದೆ ಎಂದು ಒಂದು ಕಥೆ ಹೇಳುತ್ತದೆ. ಕ್ರೆöÊಸ್ತಮತದ ಕಥೆಯಂತೆ ನೋವಾ ಅನ್ನು ರ‍್ಕ್ನಿಂದ ಬಿಡುಗಡೆ ಮಾಡಿರುವುದು ಹಿಬ್ರೂ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ ೧ನೇ ತಾರೀಖಿನಂದೇ. ಈ ಸಂದರ್ಭದಲ್ಲಿ ಎಲ್ಲರೂ ಜೋಕ್ಸ್ ಮಾಡುತ್ತಾ ಪರಿಹಾಸ್ಯದಿಂದ ಒಬ್ಬರಿಗೊಬ್ಬರು ಮೂರ್ಖರನ್ನಾಗಿ ಮಾಡಿಕೊಂಡು ಕಾಲ ಕಳೆದಂತೆ ಅದೇ ಏಪ್ರಿಲ್ ಫೂಲ್ಸ್ ಎಂದು ಮುಂದುವರಿದುಕೊAಡು ಬಂದಿದೆ ಎಂದು ಹೇಳಲಾಗಿದೆ. 

ಪ್ರಪಂಚದ ಹಲವೆಡೆ ಮಾರ್ಚ್ ೨೧ ಮತ್ತು ೨೨ರಂದು ಹಗಲುರಾತ್ರಿಗಳ ಪ್ರಮಾಣವು ಸಮನಾಗಿದ್ದು ಆಗಿನಿಂದ ಏಪ್ರಿಲ್ ೧ರಂದು ಮೋಜು ಮಜಾದ ಉತ್ಸವವೊಂದನ್ನು ಆಚರಿಸಲಾಗುತ್ತಿತ್ತು. ಈ ಉತ್ಸವದಲ್ಲಿ ನಗುವ ನಗಿಸುವ ಕ್ರಿಯೆಗೆ ಪ್ರಾಧಾನ್ಯ. ಬಹುಶ: ಈ ಉತ್ಸವವೂ ಮೂರ್ಖರ ದಿನಾಚರಣೆಯ ಪ್ರೇರಕ ಎಂದು ಕೂಡ ಹೇಳಲಾಗಿದೆ. ಕ್ರಿ.ಶ.೧೮ನೇ ಶತಮಾನದಲ್ಲಿ ಇಂಗ್ಲೇAಡಿನಲ್ಲಿ ಮೂರ್ಖರ ದಿನಾಚರಣೆ ದೇಶಾದ್ಯಂತ ವ್ಯಾಪಿಸಿ ಮುಗ್ದರು ಮಾತ್ರವಲ್ಲದೇ ಸದ್ಗೃಹಸ್ಥರನ್ನು ಪೇಚಾಟಕ್ಕೆ ಸಿಲುಕಿಸಿ ಮೋಜು ಮಜಾ ಉಡಾಯಿಸುವ ಹಿಂಸಾರತಿಯ ರೂಪವನ್ನು ತಾಳಿತು. ಆಗ ಅನೇಕ ಪ್ರಾಜ್ಞರು ಇತರರನ್ನು ಗೇಲಿ ಮಾಡಿ ಸಂತಸ ಪಡುವುದಕ್ಕಿಂತ ನಮ್ಮನ್ನು ನಾವು ಹಾಸ್ಯ ಮಾಡಿಕೊಂಡು ನಗೆ ಉಕ್ಕಿಸುವುದು ಉತ್ತಮ ಎಂದು ಪ್ರತಿಪಾದಿಸಿದರು. 

ಮೂರ್ಖರ ದಿನಾಚರಣೆಯು ಬ್ರಿಟಿಷ್‌ರೊಂದಿಗೆ ಭಾರತಕ್ಕೂ ಪಾದಾರ್ಪಣೆ ಮಾಡಿದೆ. ಭಾರತದಲ್ಲಿ ಹೋಳಿ ಹಬ್ಬದ ಅಂಗವಾಗಿ ಆಚರಿಸಲಾಗುವ ರೀತಿ ರಿವಾಜುಗಳೇ ಮೂರ್ಖರ ದಿನಾಚರಣೆಯ ಪ್ರೇರಣೆ ಎಂದು ಕೂಡ ಹೇಳಲಾಗಿದೆ. ಭಾರತದಲ್ಲೂ ಹಾಸ್ಯ ಸಂಘಗಳ ಆಶ್ರಯದಲ್ಲಿ ಮೂರ್ಖರ ದಿನಾಚರಣೆ ಆಚರಿಸಿರುವುದುಂಟು. ಈ ದಿನದಂದು ಹಾಸ್ಯ ಚಟಾಕಿಯನ್ನು ಹಾರಿಸುವುದು, ಹಾಸ್ಯ ಕವಿಗೋಷ್ಟಿಯನ್ನು ಏರ್ಪಡಿಸುವುದು, ಹಾಸ್ಯ ಪ್ರಹಸನಗಳನ್ನು ಪ್ರದರ್ಶಿಸುವುದು ನಡೆದಿದೆ. ತುಮಕೂರಿನಲ್ಲಿ ಗೌಡನಕಟ್ಟೆ ತಿಮ್ಮಯ್ಯನವರು ತಮ್ಮ ನಗೆಮಲ್ಲಿಗೆ ಸಂಸ್ಥೆಯಿAದ ಪ್ರತಿವರ್ಷ ಏಪ್ರಿಲ್೧ರಂದು ಇಲ್ಲಿನ ಗುಬ್ಬಿವೀರಣ್ಣ ಕಲಾಮಂದಿರದಲ್ಲಿ ಹಾಸ್ಯ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಕತ್ತೆಗೆ ಹೂವಿನ ಹಾರ ಹಾಕಿ ಊರಿನಲ್ಲಿ ಮೆರವಣಿಗೆ ಮಾಡಿ ಕಾರ್ಯಕ್ರಮಕ್ಕೆ ಪ್ರಚಾರ ನೀಡುತ್ತಿ÷ದ್ದರು.  ನಾನು ಮತ್ತು ಹಾಸ್ಯ ಸಾಹಿತಿ ಕೋ.ಲ.ರಂಗನಾಥರಾವ್ ಒಮ್ಮೆ ಇಲ್ಲಿ ಭಾಗವಹಿಸಿ ಈ ಸಂಸ್ಥೆಯಿAದ ಸನ್ಮಾನಕ್ಕೆ ಪಾತ್ರರಾಗಿದ್ದೇವೆ. ನಾವು ಶಾಲಾ ಕಾಲೇಜುಗಳಲ್ಲಿ ರೋಟರಿ ಲಯನ್ ಸಂಸ್ಥೆಗಳಲ್ಲಿ ಒಂದು ಗಂಟೆಯ ಹಾಸ್ಯ ಕಾರ್ಯಕ್ರಮ ನೀಡುತ್ತಿದ್ದೆವು. ಆಗ ಅವರು ಗೊರೂರಿನಲ್ಲಿ ಆಡಿಟರ್ ಆಗಿದ್ದರು. ಅವರು ಹಾಸ್ಯ ಮಾಡಿ ನಗಿಸಲು ತಮ್ಮ ಸ್ಥೂಲ ದೇಹವನ್ನೇ ಉದಾಹರಿಸಿ ತಾವು ಪೇಚಿಗೊಳಗಾದ ಪ್ರಸಂಗವನ್ನು ಹೇಳುತ್ತಿದ್ದರು. ಪ್ರಿಂಟಿAಗ್ ಮಿಸ್ಟೇಕ್‌ನಿಂದ ಆಗುವ ಅಭಾಸಗಳನ್ನು ಸ್ವಾರಸ್ಯಕರವಾಗಿ ನಿರೂಪಿಸುತ್ತಿದ್ದರು. ಆ ಮೊದಲು ಅವರು ವೈಯುಕ್ತಿಕವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ನಂತರ ನಾನು ಅವರ ಜೊತೆಗೂಡಿ ಕೆಲವು ಜೋಕ್ಸ್ಗಳನ್ನು ಆರಿಸಿಕೊಂಡು ಅದನ್ನು ಅಭಿನಯ ಮೂಲಕ ಪ್ರದರ್ಶಿಸಿ ವಿದ್ಯಾರ್ಥಿಗಳನ್ನು ನಗಿಸಲು ಯಶಸ್ವಿಯಾಗಿದ್ದೆನು. ನಾವಿಬ್ಬರೂ ಅಂದಿನ ದಿನಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯ ಹಾಸ್ಯ ಜೋಡಿಯಾಗಿದ್ದೆವು. ಹೀಗಿರಲು ಒಮ್ಮೆ ಬೆಂಗಳೂರಿನಿAದ ಒಬ್ಬ ಮಹನೀಯರು ಬಂದು ನಾವು ಬೆಂಗಳೂರಿನಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸುತ್ತಿರುವುದಾಗಿಯೂ ತಾವುಗಳು ಆಗಮಿಸಿ ಹಾಸ್ಯ ಕಾರ್ಯಕ್ರಮ ನೀಡಬೇಕೆಂದು ಆಹ್ವಾನಿಸಿ ಹೋಗಿದ್ದರು. ತದನಂತರದಲ್ಲಿ ಆಹ್ವಾನಪತ್ರಿಕೆಯನ್ನು ಕಳುಹಿಸಿದ್ದರು. ಅದರಲ್ಲಿ ಹಲವಾರು ಕವಿ ಸಾಹಿತಿಗಳ ಹೆಸರಿತ್ತು. ನಮ್ಮ ಹೆಸರೂ ಜೊತೆಗಿತ್ತು. ನಾವು ಬೆಂಗಳೂರಿಗೆ ಹೋದೆವು. ಥಿಯೇಟರ್ ತುಂಬಿ ತುಳುಕಿ ಪ್ರೇಕ್ಷಕರು ನಗುತ್ತಿದ್ದರು. ಕಾರ್ಯಕ್ರಮ ಆರಂಭವಾಗಿ ವೇದಿಕೆಗಳಲ್ಲಿ ಕೆಲವು ಹಾಸ್ಯಗಾರರು ಮಿಮಿಕ್ರಿ ಮುಖೇನ ನಗಿಸುತ್ತಿದ್ದರು. ನಮಗೆ ನಿರೂಪಕರ ಪರಿಚಯವಿಲ್ಲ.  ನಾವು ಮೂರ್ಖರು ಹೋಗಿ ನಾವು ನಗಿಸಲು ಬಂದಿದ್ದೇವೆ ಎಂಬುದನ್ನು ವರದಿ ಮಾಡಿಕೊಳ್ಳಲಿಲ್ಲ. ಸುಮ್ಮನೆ ಪ್ರೇಕ್ಷಕರಾಗಿ ಕಾರ್ಯಕ್ರಮ ನೋಡುತ್ತಾ ಈಗ ಕರೆಯಬಹುದು ಅವರ ನಂತರ ಕರೆಯಬಹುದು ಇವರ ನಂತರ ಎಂದು ಕಾಯ್ದು ಕುಳಿತೆವು. ಕಾರ್ಯಕ್ರಮ ಅಂತಿಮ ಘಟ್ಟಕ್ಕೆ ತಲುಪಿ ಎಡವಟ್ಟು ಮಾಡಿಕೊಂಡವೆAದು ತಿಳಿದು ತೆರೆಯ ಹಿಂದೆ ಹೋಗಿ ಮಾನ ರ‍್ಯಾದೆ ಬಿಟ್ಟು ನಾವು ನಗಿಸಲು ಬಂದ ಮಹಶಯರು ಎಂದು ನಮ್ಮ ಹೆಸರು ಹೇಳಿಕೊಂಡೆವು. ಅಷ್ಟರಲ್ಲಾಗಲೇ ೯ ಗಂಟೆ ಮೇಲಾಗಿ ಪ್ರೇಕ್ಷಕರು ನಕ್ಕುನಕ್ಕು ಸಾಕಾಗಿ ಮನೆಯ ಕಡೆ ಹೊರಟ್ಟಿದ್ದರು. ನನಗೂ ಉತ್ಸಹ ಕುಗ್ಗಿಹೋಗಿ ನಾನು ಸ್ವರಚಿತ ಹಾಸ್ಯ ಹನಿಗವನಗಳನ್ನು ವಾಚಿಸಿ ನಗಿಸಲು ತಿಣುಕಿದೆ. ಕೋ.ಲ. ರಂಗನಾಥರಾವ್ ತಮ್ಮ ಹೆವಿಬಾಡಿಯನ್ನು ತೋರಿ ಜೋಕ್ಸ್ ಮಾಡಿ ನಗಿಸಲು ಶ್ರಮಿಸಿದರು. ಹಸಿದ ಹೊಟ್ಟೆಗಳಿಗೆ ನಮ್ಮ ಹಾಸ್ಯ ಎಷ್ಟು ರುಚಿಸಿತೋ ಒಟ್ಟಾರೆ  ಆವರೆಗೆ ನಾವು ಎಷ್ಟೇ ಯಶಸ್ವಿ ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದರೂ ಮಿಮಿಕ್ರಿ ಕಲಾವಿದರ ಮುಂದೆ ಮಂಕಾಗಿದ್ದೆವು. 

ಏಪ್ರಿಲ್ ಫೂಲ್ಸ್ಗೆ ಸಂಬAಧಿಸಿದAತೆ ಒಂದು ಜೋಕ್ಸ್ ಹೀಗಿದೆ. ಒಂದು ಸಲ ಫ್ರೆಂಚ್ ವನಿತೆ ಏಪ್ರಿಲ್ ೧ರಂದು ಮನೆಯೊಂದರಲ್ಲಿ ಒಡವೆಗಳನ್ನು ಕಳ್ಳತನ ಮಾಡಿದಳು. ಆಕೆಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಆಕೆ ಏಪ್ರಿಲ್ ೧ರ ಸಂದರ್ಭವಾಗಿ ಮನೆಯವರನ್ನು ಫೂಲ್ ಮಾಡಲು ಕೇವಲ ತಮಾಷೆಗೋಸ್ಕತರ ಈ ಕಳ್ಳತನ ಮಾಡಿದೆ ಅಷ್ಟೇ ಎಂದು ನಗುನಗುತ್ತಾ ಹೇಳಿಕೆ ನೀಡಿದಾಗ ಹಾಸ್ಯಪ್ರಿಯರಾದ ನ್ಯಾಯಾಧೀಶರು ಕೂಡ ನಗುತ್ತಾ ತಮಾಷೆಯಾಗಿ ಮಾಡಿದ ಈ ಕಳ್ಳತನದ ಶಿಕ್ಷೆ ಏನೆಂದರೆ ಬರುವ ಏಪ್ರಿಲ್ ೧ನೇ ತಾರೀಖಿನವರೆಗೆ ಜೈಲಿನಲ್ಲಿದ್ದು ತಮಾಷೆಯಾಗಿ ನಗುನಗುತ್ತಾ ಕಾಲ ಕಳಿ ಎಂದು ತೀರ್ಪು ನೀಡಿದರಂತೆ!







Post a Comment

Previous Post Next Post