ಕೋವಿಡ್ -19 ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಕೆಗಳು ಮೀಸಲು

ಹಾಸನ ಏ.೨೩ :-ಕೋವಿಡ್ ೧೯ ಚಿಕಿತ್ಸೆಗಾಗಿ ಸರ್ಕಾರಕ್ಕೆ ಶೇ ೫೦ ರಷ್ಟು  ಹಾಸಿಗೆಗಳನ್ನು ಮೀಸಲಿರಿಸಿ ಒದಗಿಸದ ಖಾಸಗಿ ಆಸ್ಪತ್ರೆಗಳ ಒ.ಪಿ.ಡಿ ಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅವರು ಜಿಲ್ಲಾಡಳಿತಕ್ಕೆ  ಕಟ್ಟುನಿಟ್ಟಿನ  ಸೂಚನೆ ನೀಡಿದ್ದಾರೆ.

 ಹಾಸನ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರ ಇಲಾಖಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಹಿಮ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿರುವುದರಿಂದ ಎಲ್ಲಾ ಖಾಸಗಿ ಆಸ್ಪತ್ರೆಗಳು  ಶೇ ೫೦ರಷ್ಟು ಹಾಸಿಗೆಗಳನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಬಿಟ್ಟು ಕೊಡಬೇಕಿದೆ ಎಂದು ತಿಳಿಸಿದರು.
 
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ೩೭೩ ಹಾಸಿಗೆಗಳನ್ನು ಗುರುತಿಸಿ ಬಿಟ್ಟುಕೊಡುವಂತೆ ಆದೇಶ ಹೊರಡಿಸಲಾಗಿದೆ. ೭ ಆಸ್ಪತ್ರೆಗಳು ಆರೋಗ್ಯ ರಕ್ಷಾ ಯೋಜನೆಯಡಿ ನೋಂದಾಯಿಸಿದ್ದು ಉಳಿದವು ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂದು ವಿವರ ನೀಡಿದರು.

 ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯದರ್ಶಿಯವರು ಇದೊಂದು ಸಂದಿಗ್ಧ ಪರಿಸ್ಥಿತಿ ಇಂತಹ ಸಂದರ್ಭದಲ್ಲಿ  ಸಹಕಾರ ನೀಡದ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲೇಬೇಕು ಹಾಗಾಗಿ ಕಠಿಣ ಕ್ರಮಕೈಗೊಳ್ಳಿ ಎಂದರು.

   ಈಗಾಗಲೇ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದರಿಂದ ಹಾಸಿಗೆಗಳು   ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರನ್ನು ವರ್ಗಾಯಿಸಿ  ಅಲ್ಲದೆ ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಲು ಈಗಾಗಲೇ ಸನ್ನದ್ಧರಾಗಿರಬೇಕು. ಹಿಮ್ಸ್  ಜನರ ಅಂತಿಮ ಭರವಸೆ ಹಾಗಾಗಿ ಅಲ್ಲಿ ಬೇಡ್‌ಗಳ ಸಾಮರ್ಥ್ಯ ಹೆಚ್ಚಿಸಬೇಕು  ಎಂದು ನವೀನ್ ರಾಜ್  ಸಿಂಗ್ ಅವರು ಹಿಮ್ಸ್  ನಿರ್ದೇಶಕರಿಗೆ ಸೂಚನೆ ನೀಡಿದರು.

 ಇದೇ ವೇಳೆ ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್ ಮಾತನಾಡಿ ಆಸ್ಪತ್ರೆಯಲ್ಲಿ ಹಾಲಿ ೧೩ ಸಾವಿರ ಕಿಲೋ ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕ ಇದೆ ಆದರೆ ಈಗಿನ ಸಂದರ್ಭದಲ್ಲಿ ಪ್ರತಿದಿನ ೬೦೦೦ ಲೀಟರ್ ಆಮ್ಲಜನಕ ಬಳಕೆಯಾಗುತ್ತಿದೆ,  ಹೆಚ್ಚುವರಿಯಾಗಿ ಇನ್ನೂ ಒಂದು  ಹಾಗಾಗಿ ಇನ್ನೊಂದು ೧೩೦೦೦ ಕಿಲೋಮೀಟರ್ ಸಾಮರ್ಥ್ಯವುಳ್ಳ ಟ್ಯಾಂಕ್ ಒದಗಿಸುವುದು ಅಗತ್ಯವಿದೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ  ಎಂದರು.

ಈ  ಬಗ್ಗೆ ತಾವು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಒದಗಿಸಲು ಪ್ರಯತ್ನಿಸಲಾಗುವುದು ಎಂದು ನವೀನ್‌ರಾಜ್ ಸಿಂಗ್ ಅವರು   ಭರವಸೆ ನೀಡಿದರು. 

ರೀತಿ ಹಾಸನ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಅದರ ಆಡಿಟ್ ಮಾಡಿಸಿ ವರದಿ ಮಾಡಲಾಗುತ್ತಿದೆಯಾದರೂ  ಬೆಂಗಳೂರಿನಿAದ ತಜ್ಞರ ಸಮಿತಿ ಆಗಮಿಸಿ ಆಸ್ಪತ್ರೆಯಲ್ಲಿ  ನೀಡಲಾಗುತ್ತಿರುವ ಚಿಕಿತ್ಸಾ ವಿಧಾನ ಔಷದೊಪಕರಣ ಶಿಷ್ಠಾಚಾರ  ಸರಿ ಇದೆಯೇ ಎಂದು ಪರಿಶೀಲಿಸಿ ವರದಿ ನೀಡಿದರೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಜಿಲ್ಲೆಯಲ್ಲಿ  ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವರ್ ಚುಚ್ಚುಮದ್ದು ಪೂರೈಕೆಯಲ್ಲಿ ವ್ಯತ್ಯೆಯವಾಗುತ್ತಿದೆ  ಸರಬರಾಜು ಪ್ರಮಾಣವನ್ನು ಏರಿಕೆ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಸಭೆಯಲ್ಲಿ  ಮನವಿ ಮಾಡಿದರು.

 ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯೊಂದಿಗೆ ಹಾಗೂ ನಿರ್ದೇಶಕರೊಂದಿಗೆ ಚರ್ಚಿಸಿ ಹಿಮ್ಸ್ ಗೆ ತಜ್ಞರ ತಂಡವನ್ನು ಕಳುಹಿಸಲಾಗುವುದು ಹಾಗೂ ಖಾಸಗಿ ಆಸ್ಪತ್ರೆಗಳ ರೆಮ್‌ಡಿಸಿವರ್ ಚುಚ್ಚುಮದ್ದು ಪೂರೈಕೆ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

 ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಎದುರಾಗಬಹುದು ಅದಕ್ಕೆ ಸನ್ನದ್ಧರಾಗಿ ಚಿಕಿತ್ಸಾ ಸೌಲಭ್ಯಕ್ಕೆ ಕೋವಿಡ್‌ಕೇರ್ ಕೇಂದ್ರಗಳ ಸ್ಥಾಪನೆ ಹೆಚ್ಚಿಸಿ, ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿರುವವರಿಗೆ ಔಷಧಿಗಳನ್ನು ಒದಗಿಸಿ,  ಆಗಿದ್ದಾಗೆ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿ ಎಂದು ನವೀನ್ ರಾಜ್ ಸಿಂಗ್ ನಿರ್ದೇಶನ  ನೀಡಿದರು.

 ಆರ್.ಟಿ.ಪಿ.ಸಿ. ಆರ್ ಪರೀಕ್ಷೆ ಹೆಚ್ಚಿಸಿ ಸಾರ್ವಜನಿಕರಿಗೆ ಪರಿವರ್ತನೆಗೊಂಡಿರುವ ಕೋವಿಡ್ ವೈರಸ್ ಪರಿಣಾಮಗಳ  ಗುಣಲಕ್ಷಣಗಳನ್ನು  ವಿವರಿಸಿ, ಮೊದಲ ಹಂತದಲ್ಲೆ ವೈದ್ಯರಿಗೆ ತೋರಿಸಿ ಕುರಿತು ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಹೇಳಿದರು.

 ಕೋವಿಡ್ ರಾತ್ರಿ ಕರ್ಫ್ಯೂ ಹಾಗೂ  ವೀಕೆಂಡ್ ಕರ್ಫ್ಯೂ ಅನುಷ್ಠಾನದ ಬಗ್ಗೆ ಅಪರ ಪೊಲೀಸ್ ವರಿಷ್ಠಾಧಿಕಾರಿ  ನಂದಿನಿ ಅವರು ಮಾಹಿತಿ ನೀಡಿದರು ಯಾವುದೇ ಲೋಪ ಇದ್ದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಮುಂದುವರೆಯುವAತೆ ನವೀನ್ ರಾಜ್  ಸಿಂಗ್ ತಿಳಿಸಿದರು.

ಸಭೆಯಲ್ಲಿ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಎ ಪರಮೇಶ್,  ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ವೈದ್ಯಾಧಿಕಾರಿ ಡಾ|| ಸುರೇಶ್,  ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Post a Comment

Previous Post Next Post