ಹಾಸನ :- ಜಿಲ್ಲೆಯ ವಿವಿಧೆಡೆ ಕಳ್ಳತನವಾಗಿದ್ದ ವಾಹನ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸಿದ ಜಿಲ್ಲಾ ಪೊಲೀಸರು ಕಳ್ಳತನವಾಗಿದ್ದ ವಸ್ತುಗಳನ್ನು ಆ ವಸ್ತುಗಳ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ನಗರದ ಡಿ.ಎ.ಆರ್ ಮೈದಾನದಲ್ಲಿ ಪ್ರಾಪರ್ಟಿ ಪೆರೇಡ್ ನಡೆಸಿ 2.80 ಕೋಟಿ ಮೌಲ್ಯದ ಆಭರಣ, ವಾಹನಗಳು ಹಾಗೂ ಇನ್ನಿತರ ಮೌಲ್ಯಯುತ ವಸ್ತುಗಳನ್ನು ದಕ್ಷಿಣ ವಲಯದ ಐಜಿಪಿ ಶ್ರೀಯುತ ಪ್ರವೀಣ್ ಮಧುಕರ್ ಪವಾರ್ IPS ರವರ ಸಮ್ಮುಖದಲ್ಲಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸಗೌಡ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಂದಿನಿ, ಇಲಾಖಾ ಸಿಬ್ಬಂದಿ ಹಾಗೂ ವಸ್ತುಗಳ ಮಾಲೀಕರು ಹಾಜರಿದ್ದರು.