ಹಾಸನ: ಕಂದಾಯ ಇಲಾಖೆಗೆ ಸಂಬAಧಿಸಿದ ವಿಷಯೊಂದಕ್ಕೆ ಸಬ್‌ಇನ್ಸ್ಪೆಕ್ಟರ್ ಮಧ್ಯೆ ಪ್ರವೇಶಿಸಿ ರೈತನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಯದೀಶ್ ಶೆಟ್ಟಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರದಂದು ಮಾತನಾಡಿ, ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಗೋಳೇನಹಳ್ಳಿ ಗ್ರಾಮದ ನಿವಾಸಿ ಹನುಮಂತೇಗೌಡ ಪೊಲೀಸರ ಹಲ್ಲೆಗೆ ಒಳಗಾದ ರೈತ, ಹನುಮಂತೇಗೌಡ ಮತ್ತು ಅವರ ಅಣ್ಣತಮ್ಮಂದಿರದು ಮಲ್ಲಪ್ಪನಹಳ್ಳಿಯ ಸರ್ವೆ ನಂಬರ್ ೭೭/೩ ರಲ್ಲಿ ೧೫ ಎಕರೆ ಜಮೀನು ಇದ್ದು, ಅದರಲ್ಲಿ ೧೧ ಎಕರೆ ೩೫ ಗುಂಟೆ ಖರಾಬು ಪ್ರದೇಶ ಇರುತ್ತದೆ. ಉಳಿದ ೩ ಎಕರೆ ೧೫ ಗುಂಟೆಯಲ್ಲಿ ಉಳಿಮೆ ಮಾಡಿಕೊಂಡು ಜೀವನ ಸಾಗಿಸಬೇಕು. ಖರಾಬು ಪ್ರದೇಶಕ್ಕೂ ಕೂಡ ಹನುಮಂತೇಗೌಡ ಮತ್ತು ಅವರ ಕುಟುಂಬದವರೆ ವಾರಸುದಾರರು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಒಮ್ಮೆ ಸರ್ವೆ ಮಾಡಿ ಹೋಗಿದ್ದು, ಹೀಗಿರುವಾಗ ಕಳೆದ ಒಂದು ವಾರದಿಂದ ಯಾರೋ ಅಪರಿಚಿತರು ಆ ಜಾಗಕ್ಕೆ ಬಂದು ನಮಗೆ ರಾಯಲ್ಟಿ ಆಗಿದೆ. ನಾವು ಇಲ್ಲಿ ಗಣಿಗಾರಿಕೆ ನಡೆಸುತ್ತೇವೆ ಎಂದು ಬಂದಿದ್ದಾರೆ ಎಂದರು.
ಆದಾದ ಮೇಲೆ ೨೦೨೧ ಏಪ್ರಿಲ್ ೨೧ ರಂದು ಹನುಮಂತೇಗೌಡ ಮತ್ತು ಅವರ ಹೆಂಡತಿ
ಮೀನಾಕ್ಷಿ ಹಾಗೂ ಅವರ ಚಿಕ್ಕಪ್ಪನ ಮಗಳು ರೂಪ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ
ಹನುಮAತೇಗೌಡರಿಗೆ ಪೊಲೀಸರು ಪೋನ್ ಮಾಡಿ ನಿನ್ನ ಬಂಡೆಯ ಬಳಿ ಬಂದಿದ್ದಿವಿ ಬಾ ಎಂದು
ಅವರನ್ನು ಕರೆದಿದ್ದು, ತಮ್ಮ ಬೈಕ್‌ನ್ನು ತೆಗೆದುಕೊಂಡು ಅಲ್ಲಿಗೆ ಹೋದರು. ಆಗ ಗೊರೂರು ಪೊಲೀಸ್ ಠಾಣೆಯ ಪಿ.ಎಸ್.ಐ ಸಾಗರ್ ಹಾಗೂ ನಾಲ್ಕೆöÊದು ಪೋಲೀಸರು ಇದ್ದರು. ಮೋಬೈಲ್ ಪೋನ್ ಹಾಗೂ ಬೈಕಿನ ಕೀ ಕಿತ್ತುಕೊಂಡರು ಪ್ರಶ್ನೆ ಮಾಡಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಾಗಿ ದೂರಿದರು.
ಗಣಿಗಾರಿಕೆ ಮಾಡುವವರಿಗೆ ತೊಂದರೆ ಕೊಡುತ್ತಿರುವೆಯಲ್ಲ ಯಾಕೆ ಎಂದು ಪೊಲೀಸರು ಪ್ರಶ್ನೆ ಮಾಡಿದರು. ಹನುಮಂತೇಗೌಡರು ಸರ್ ನಾನು ತೊಂದರೆ ಕೊಟ್ಟಿಲ್ಲ ಇದು ನಮ್ಮ ಸರ್ವೆ ನಂ. ನಲ್ಲಿರುವ ಜಾಗ ಬೇಕಾದರೆ ಸರ್ವೇ ಮಾಡಿಸಿಕೊಂಡು ಮುಂದುವರೆಸಿ ಎಂದು ಹೇಳಿದ್ದೇನೆ. ಬೇಕಾದರೆ ನಿಮಗೂ ಕೂಡ ದಾಖಾಲಾತಿಯನ್ನು ಕೊಡುತ್ತೇನೆ ಪರಿಶೀಲಿಸಿ ನೋಡಿ ಇದು ನಮ್ಮ ಜಾಗ ಎಂದು ಹೇಳಿರುತ್ತಾರೆ ತಕ್ಷಣವೇ ಇದು ನಿಮ್ಮಪ್ಪನ ಜಾಗನ? ನಿಮ್ಮ ತಾತನ ಜಾಗನ? ಎಂದು ಏರು ಧ್ವನಿಯಲ್ಲಿ ಗಧರಿಸಿ ಹನುಮಂತೇಗೌಡರಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ನಂತರ ಠಾಣೆಗೆ ಅವರನ್ನು ಅದೇ ಪರಿಸ್ಥಿತಿಯಲ್ಲಿ ಜೀಪ್ಪಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಹೋದ ನಂತರ ಅಲ್ಲಿನ ಸಿಬ್ಬಂಧಿಗಳು ನನಗೆ ಹೊಸ ಒಳಉಡುಪನ್ನು ತಂದು ಕೊಟ್ಟಿದ್ದಾರೆ. ಅವರು ಠಾಣೆಯಲ್ಲಿಯೇ ಮಲವನ್ನು ಸ್ವಚ್ಛಮಾಡಿಕೊಳ್ಳುತ್ತಾರೆ ಮತ್ತು ಒಳಉಡುಪನ್ನು ಬದಲಾಯಿಸುತ್ತಾರೆ. ಮದ್ಯಾಹ್ನದವರೆಗೂ ಠಾಣೆಯಲ್ಲಿ ಕೂರಿಸಿಕೊಂಡು ಖಾಲಿ ಹಾಳೆಯ ಮೇಲೆ ಸಹಿ ತೆಗೆದುಕೊಂಡು ಇನ್ನೊಮ್ಮೆ ಆ ಜಾಗಕ್ಕೆ ಹೋದರೆ ಜೈಲಿಗೆ ಕಳಿಸುತ್ತೇನೆಂದು ಬೆದರಿಕೆ ಹಾಕಿ ಕಳುಹಿಸಲಾಗಿದೆ.
ನಂತರ ಅವರು ಮನೆಗೆ ಬಂದು ಸಂಜೆವರೆಗು ಮಲಗಿ ಸುದಾರಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತೆ ್ಸ ಪಡೆದಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಇವರ ಮೇಲೆ ಹಲ್ಲೆ ಮಾಡಿರುವ ಪಿ.ಎಸ್.ಐ. ಸಾಗರ್ ಹಲ್ಲೆ ಮಾಡಿದಕ್ಕೆ ಸೂಕ್ತ ಶಿಸಿ ್ತನ ಕ್ರಮಕೈಗೊಳ್ಳುವರು ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಲ್ಲೆಗೆ ಒಳಗಾದ ರೈತ ಹನುಮಂತೇಗೌಡ, ಇತನ ಪತ್ನಿ ಮೀನಾಕ್ಷಿ, ಚಿಕ್ಕಮ್ಮನ ಮಗಳು ರೂಪ ಹಾಗೂ ಪಕ್ಕದ ಜಮೀನಿನ ರೈತ ವಸಂತ್‌ಕುಮಾರ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ