ಹಾಸನದಲ್ಲಿ ಕೋವಿಡ್ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ- ಜಿಲ್ಲಾಧಿಕಾರಿ


ಹಾಸನ ಏ.೨೧ :-ಕೋವಿಡ್ ೧೯ ದಿನೇ  ದಿನೇ ಹೆಚ್ಚು ವ್ಯಾಪಿಸುತ್ತಿರುವುದು ರಿಂದ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಸುದ್ದಿಗೋಷ್ಠಿ ನಡೆಸಿದ ಅವರು ಏ.೨೧ ರ ೯ ಗಂಟೆ ಯಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಹೇಳಿದರು.

     ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್ ೧೯  ಕುರಿತು ದಿನದ ೨೪ ಗಂಟೆಗಳ ಕಾಲ ಅಗತ್ಯ ಸಲಹೆ ಮಾಹಿತಿ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರ ಕಚೇರಿಯಲ್ಲಿ ಕೋವಿಡ್ ೧೯ ಸಹಾಯವಾಣಿ ತೆರೆಯಲಾಗಿದ್ದು. ಸಾರ್ವಜನಿಕರು ೦೮೧೭೨-೨೪೬೫೭೫ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಗತ್ಯ ಸಲಹೆ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು  ಜಿಲ್ಲಾಧಿಕಾರಿ ತಿಳಿಸಿದರು.

ಇದೇ ರೀತಿ ಕೋವಿಡ್-೧೯   ಸಂಬAಧಿಸಿದAತೆ ವೈದ್ಯರ ಸಲಹೆ ಸಮಾಲೋಚನೆಗಾಗಿ ೯೪೮೦೦೬೧೧೧೧ ಗೆ ಸಂಪರ್ಕಿಸಬಹುದಾಗಿದೆ ಎಂದರು 

ಕೋವಿಡ್ ತೀವ್ರ ವಾದ  ಸಂದರ್ಭಕ್ಕೆ ಮುನ್ನೆಚ್ಚರಿಕೆಯಾಗಿ ಪ್ರತಿ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಈಗಾಗಲೇ  ಹಾಸ್ಟೆಲ್ ಗಳನ್ನೂ  ಎಂದು ತಿಳಿಸಿದರು 

     ಪ್ರತಿದಿನ ರಾತ್ರಿ ೯ ಗಂಟೆಯಿAದ ಮರುದಿನ ಬೆಳಗ್ಗೆ ೬ ಗಂಟೆ ವರೆಗೆ ರಾತ್ರಿ ಕರ್ಫ್ಯೂ ಇರಲಿದೆ ಅದೇ ರೀತಿ ಶುಕ್ರವಾರ ೯ ಗಂಟೆಯಿAದ ಸೋಮವಾರ ಬೆಳಗ್ಗೆ ೬ ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

      ಎಲ್ಲಾ ಶಾಲಾ ಕಾಲೇಜು ಶೈಕ್ಷಣಿಕ ತರಬೇತಿ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಮುಚ್ಚಲಾಗಿದೆ ಆನ್ ಲೈನ್ ಪಾಠಗಳು  ಮುಂದುವರಿಯಲಿವೆ ಎಂದರು.

      ಚಿತ್ರಮಂದಿರಗಳು ಶಾಪಿಂಗ್ ಮಾಲ್ ಗಳು ಜಿಮ್ ಯೋಗ ಕೇಂದ್ರ ಕ್ರೀಡಾಂಗಣ ಈಜುಕೊಳ  ಮನೋರಂಜನಾ ಕೇಂದ್ರಗಳು , ಅಮಾಸ್ ಮೆಂಟ್ ಪಾರ್ಕ್ ಗಳು ,ಸಭಾಂಗಣಗಳು , ಮುಚ್ಚಿರಲಿವೆ 

  ಎಲ್ಲಾ ರೀತಿಯ ಧಾರ್ಮಿಕ ಸಾಮಾಜಿಕ, ರಾಜಕೀಯ, ಕ್ರೀಡಾ ಚಟುವಟಿಕೆಗಳಲ್ಲಿ ಜನಸಂದಣಿ ಸೇರುವುದು ಸಂಪೂರ್ಣವಾಗಿ ನಿಷೇಧಿಸಿದೆ  ಆದರೆ ದೇವಸ್ಥಾನ, ಮಸೀದಿಗಳಲ್ಲಿ ದಿನ ನಿತ್ಯ ಪೂಜೆಗಳು ಎಂದಿನAತೆ ಅರ್ಚಕರು, ಪಾದ್ರಿಗಳು, ಮಾಲಿಗಳು, ಆರಾಧ್ಯಕರು  ಪೂಜೆ ಸಲ್ಲಿಸಬಹುದಾಗಿದೆ 

ಮದುವೆ ಹಾಗೂ  ಇತರ ಕಾರ್ಯಕ್ರಮಗಳಿಗೆ  ತಹಸೀಲ್ದಾರ್‌ಗಳಿಂದ ಅನುಮತಿ ಪಡೆಯಬೇಕು.  ಕಾರ್ಯಕ್ರಮದಲ್ಲಿ ೫೦ ಜನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು  ಹೇಳಿದರು 

  ಹೋಟೆಲ್ ,ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸುವಂತಿಲ್ಲ.  ಪಾರ್ಸಲ್ ಗಳಿಗೆ  ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು 

    ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಹಾಜರಿದ್ದರು.


Post a Comment

Previous Post Next Post