ಆಲೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಬಳಿಯ ಬಿಕ್ಕೋಡು ರಸ್ತೆಯಲ್ಲಿ ಶುಕ್ರವಾರ ಮದ್ಯಾಹ್ನ ನಡೆದಿದೆ.
ಹಾಸನದ ಆಬ್ರಾರ ಪಾಷ (೨೭) ಮೃತ ದುರ್ದೈವಿಯಾಗಿದ್ದು.
ಬೇಲೂರು ತಾಲೂಕಿನ ಅರೆಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಹಾಸನಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಕಾರ್ಜುವಳ್ಳಿ ಗ್ರಾಮದ ತಿರುವಿನಲ್ಲಿ ನಾಯಿ ಅಡ್ಡಬಂದಾಗ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದಾರೆ. ಕಾರು ಮರಕ್ಕೆ ಹೊಡೆದ ರಭಸಕ್ಕೆ ಸಂಪೂರ್ಣವಾಗಿ ಕಾರು ಜಖಂಗೊಂಡು ತಲೆಗೆ. ಎದೆಗೆ ತೀವ್ರ ಪೆಟ್ಟುಬಿದ್ದಿದೆ ಚಿಕಿತ್ಸೆಗಾಗಿ ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಕ್ಷೀಸಿ ಆಬ್ರಾರ ಪಾಷ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
ಆಲೂರು