ಬೇಲೂರು : ಪಟ್ಟಣದ ಬಿಸ್ಟಮ್ಮನ ಕೆರೆ ಸಮೀಪದ ಮಲ್ಲಾಪುರ ಗ್ರಾಮದ ಬಳಿ ಇರುವ ಪ್ರಸಿದ್ಧ ಶ್ರೀಶನೇಶ್ವರಸ್ವಾಮಿ ದೇವಾಲಯದ ಅರ್ಚಕ ಮೊಗಣ್ಣಗೌಡ (೮೬) ಇಂದು ಸಂಜೆ ನಿಧನ ಹೊಂದಿದರು.
ಮೃತರು ಕಳೆದ ೫ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ ಮೂವರು ಪುತ್ರರು ಇದ್ದಾರೆ. ಮೃತರ ಅಂತ್ಯ ಸಂಸ್ಕಾರ ಗುರುವಾರ ಮೃತರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ದಿವಂಗತರು ಶ್ರೀ ಶನೇಶ್ವರ ದೇಗುಲ ನಿರ್ಮಾಣ ಸಂದರ್ಭ ದೇಗುಲ ನಿರ್ಮಾಣಕ್ಕೆ ಶ್ರಮ ವಹಿಸಿದ್ದರು. ಅಂದು ದೇಗುಲ ಸಮಿತಿ ಅಧ್ಯಕ್ಷರಾಗಿದ್ದ ನಾಗರಾಜ್‌ಅಣ್ಣೇಗೌಡ ಅವರ ದೇಗುಲ ನಿರ್ಮಾಣ ಸಮಿತಿಗೆ ಹೆಚ್ಚಿನ ಸಹಕಾರ ನೀಡಿದ್ದರು. ಹರಿಕಥೆ ಹೇಳುವ ಅಭ್ಯಾಸವನ್ನೂ ಹೊಂದಿದ್ದರು. ಮೊಗಣ್ಣಗೌಡರು ಅಪಾರ ಭಕ್ತರ ಸ್ನೇಹಮಯಿ ಹಾಗೂ ಜನಾನುರಾಗಿಯಾಗಿದ್ದರು.
ಮೃತರ ನಿಧನದ ಪ್ರಯುಕ್ತ ಶ್ರೀ ಶನೇಶ್ವರ ದೇಗುಲದ ಬಾಗಿಲನ್ನು ಬಂದ್ ಮಾಡಲಾಗಿತ್ತು. ಉಪ್ಪಾರ ಸಂಘದ ರಾಜ್ಯ ನಿರ್ದೇಶಕ ಸತ್ಯನಾರಾಯಣ, ಪುರಸಭಾ ಸದಸ್ಯೆ ರತ್ನಮ್ಮ, ಉಪ್ಪಾರ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನಕುಮಾರ್ ಹಾಗೂ ದೇಗುಲ ಸಮಿತಿಯವರು ಹಾಗೂ ದೇಗುಲ ಸುತ್ತಲಿನ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.